ಶೃಂಗೇರಿ ಶಾರದಾ ಮಠ ಪೀಠಾಧ್ಯಕ್ಷರ ಸನ್ನಿಧಿಯಲ್ಲಿ Soundarya Lahari Parayana
ವೇದಾಂತಭಾರತಿ ಸಂಸ್ಥೆಯೂ ಬೆಂಗಳೂರಿನ ಶಾಲೀನಿ ಆಟದ ಮೈದಾನದಲ್ಲಿ ಸೌಂದರ್ಯ ಲಹರಿ ಪಾರಾಯಣ ಆಯೋಜನೆಗೊಳಿಸಿತ್ತು. ಹತ್ತು ಸಾವಿರಕ್ಕು ಹೆಚ್ಚು ವೇದಾಂತಭಾರತಿ ಕಾರ್ಯಕರ್ತರು ಸೌಂದರ್ಯ ಲಹರಿ ಪಾರಾಯಣ ನಡೆಸಿದರು.
ಬೆಂಗಳೂರು (ಜೂ.14): ರಾಜ್ಯದಾದ್ಯಂತ ವಿಶೇಷ ರೀತಿಯಲ್ಲಿ ಸ್ತೋತ್ರ ಪಾರಾಯಣ ಕಾರ್ಯಕ್ರಮಗಳನ್ನು ಪ್ರತಿವರ್ಷವು ನಡೆಸಿಕೊಂಡು ಬರುತ್ತಿರುವ ವೇದಾಂತಭಾರತಿ ಸಂಸ್ಥೆಯೂ ಈ ಬಾರಿ ಬೆಂಗಳೂರಿನ ಶಾಲೀನಿ ಆಟದ ಮೈದಾನದಲ್ಲಿ ಸೌಂದರ್ಯ ಲಹರಿ ಪಾರಾಯಣ ಆಯೋಜನೆಗೊಳಿಸಿತ್ತು. ಹತ್ತು ಸಾವಿರಕ್ಕು ಹೆಚ್ಚು ವೇದಾಂತಭಾರತಿ ಕಾರ್ಯಕರ್ತರು ಸೌಂದರ್ಯ ಲಹರಿ ಪಾರಾಯಣ ನಡೆಸಿದ್ರು, ಹಿರಿಯರು, ಕಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಶೃಂಗೇರಿ ಶ್ರೀಗಳ ಸಾನಿಧ್ಯದಲ್ಲಿ ಸೌಂದರ್ಯಲಹರಿ ಪಾರಾಯಣ ಮಾಡುವುದರ ಮೂಲಕ ಜಗನ್ಮಾತೆಯ ಕೃಪೆಗೆ ಪಾತ್ರರಾದ್ರು. ಶೃಂಗೇರಿ ಶಾರದಪೀಠಾಧ್ಯಕ್ಷರಾದ ಶ್ರೀ ವಿಧುಶೇಖರ ಭಾರತಿ ಸನ್ನಿದಿಯಲ್ಲಿ ಸೌಂದರ್ಯ ಲಹರಿ ಪಾರಾಯಣ ಮಾಡಿ ಭಕ್ತರು ಧನ್ಯತಭಾವ ಅನುಭವಿಸಿದ್ರು.
CHIKKAMAGALURU ಸೋಲಾರ್ ವಿದ್ಯುತ್ ಘಟಕ ಆರಂಭಕ್ಕೆ ವಿಘ್ನ
ಶೃಂಗೇರಿ ಶಾರದ ಪೀಠಾಧ್ಯಕ್ಷರಾದ ವಿಧುಶೇಖರ ಭಾರತಿ ಅವರು ಪಾರಾಯಣದಲ್ಲಿ ಪಾಲ್ಗೊಂಡ ಭಕ್ತದಿಗಳಿಗೆ ಆರ್ಶೀವಚನ ನೀಡಿದ್ರು, ವೇದಾಂತ ಭಾರತಿ ಸಂಸ್ಥೆ 25 ವರ್ಷಗಳಿಂದ ಅತ್ಯುತ್ತಮ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದು, ನಮ್ಮ ಪೀಠಾದ ಮಗುವಿನಂತೆ ಎಂದು ತಿಳಿಸಿದ್ರು. ಈ ಕಾರ್ಯಕ್ರಮವನ್ನು ದೇಶದಾದ್ಯಂತ ಮಾಡುವ ಆಲೋಚನೆ ಇದ್ದು, ಎಲ್ಲರಲ್ಲಿಯೂ ಇರುವ ಆತ್ಮ ಒಂದೇ, ಅದು ಏಕಾತ್ಮ ಎಂಬುದಾಗಿ ಸಾರುವುದು, ಪಾರಾಯಣದ ಮೂಲಕ ಎಲ್ಲ ವರ್ಗದವರನ್ನು ಒಂದು ಕೂಡಿಸುವುದು ನಮ್ಮ ಆಶಾಯ ಅನ್ನೋದಾಗಿ ವೇದಾಂತ ಭಾರತಿಯ ಸ್ವಯಂ ಸೇವಕರಾದ ಗೋಪಾಲಕೃಷ್ಣ ತಿಳಿಸಿದರು.