ಉಚ್ಚಿಲ ಮಹಾಲಕ್ಷ್ಮೀ ಸನ್ನಿಧಾನ; ಒಂದೇ ದೇವಾಲಯದಲ್ಲಿ ಮೂರು ಶಕ್ತಿಗಳ ಅನುಗ್ರಹ!
ಒಂದೇ ದೇವಾಲಯದಲ್ಲಿ ಮೂರು ಶಕ್ತಿಗಳ ಅನುಗ್ರಹ..!
ಲಕ್ಷ್ಮೀ ಸನ್ನಿಧಾನದಲ್ಲಿ ನಾಗಾಲಯವೂ ಇದೆ
ಭಯ ನಿವಾರಣೆಗೆ ಭದ್ರಕಾಳಿ ದರ್ಶನ
ಮನಸ್ಸಿನ ಪ್ರಸನ್ನತೆಗೆ ಪ್ರಸನ್ನ ಗಣಪತಿ ದರ್ಶನ
ಕರ್ನಾಟಕದ ಒಂದು ಅಪೂರ್ವ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ಶ್ರೀ ಕ್ಷೇತ್ರ. ಶ್ರೀಕ್ಷೇತ್ರದ ಮಹತ್ವವೆಂದರೆ ಇಲ್ಲಿ ಯಾರು ಬೇಡಿಕೊಂಡರೂ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದಕ್ಕೆ ಕಾರಣ ಈ ಕ್ಷೇತ್ರದ ಮೂರು ದಿವ್ಯ ಶಕ್ತಿಗಳು. ಇಲ್ಲಿ ನಾಗ, ಭದ್ರಕಾಳಿ ಹಾಗೂ ಮಹಾಲಕ್ಷ್ಮೀ ಸನ್ನಿಧಾನಗಳಿವೆ. ಈ ಸನ್ನಿಧಾನಗಳ ದರ್ಶನದಿಂದ ಮನುಷ್ಯರ ಸಮಸ್ಯೆಗಳು ತಕ್ಷಣದಲ್ಲಿ ಪರಿಹಾರವಾಗುತ್ತವೆ.
ಸಾಮಾನ್ಯವಾಗಿ ಮನುಷ್ಯರಿಗೆ ಬಂದೊದಗುವ ಸಂಕಟಗಳು ಮೂರು ರೀತಿಯಲ್ಲೇ ಇರುತ್ತವೆ. ಅವೇ ಅಧಿ ಭೌತಿಕ- ಅಧಿ ದೈವಿಕ- ಅಧ್ಯಾತ್ಮಿಕ ಕಂಟಕಗಳು. ಈ ಸಂಕಟಗಳಿಂದ ಹೊರಬರಲಿಕ್ಕೆ ಈ ಕ್ಷೇತ್ರ ದರ್ಶನವೇ ಮಹಾ ಸಾಧನ.
ಶನಿ ಚಂದ್ರ ಯುತಿಯಿಂದ ವಿಷಯೋಗ! ಇಲ್ಲಿದೆ ಪರಿಹಾರ..
ಇಲ್ಲಿನ ನಾಗಾಲಯದಲ್ಲಿ ಆದಿ ದೈವಿಕ ಸಮಸ್ಯೆಗಳು ಪರಿಹಾರವಾದರೆ, ಇಲ್ಲಿನ ಭದ್ರಕಾಳಿ ಆದಿ ಭೌತಿಕವಾದ ಸಮಸ್ಯೆಗಳನ್ನು ಪರಿಹರಿಸುತ್ತಾಳೆ. ಇನ್ನು ಕೇಂದ್ರ ಶಕ್ತಿ ಮಹಾಲಕ್ಷ್ಮೀ ಆಧ್ಯಾತ್ಮಿಕ ಕಂಟಕಗಳನ್ನು ಪರಿಹರಿಸಿ ಭಕ್ತರನ್ನು ಸಂಪೂರ್ಣ ಅನುಗ್ರಹಿಸುತ್ತಾರೆ.