ಸಿಂಧೂರನನ್ನು ಸಂಹರಿಸುವುದಾಗಿ ಪಾರ್ವತಿಗೆ ಮಾತು ಕೊಟ್ಟ ಗಣಪತಿ; ಮುಂದೆ ನಡೆದಿದ್ದೇನು?
ಒಂದು ಸಲ ಶಿವನು ಬ್ರಹ್ಮಲೋಕಕ್ಕೆ ಹೋದಾಗ ಬ್ರಹ್ಮ ದೇವ ಯೋಗ ನಿದ್ದೆಯಲ್ಲಿದ್ದ. ಪರಿಚಾರಕರು ಎಬ್ಬಿಸಿದಾಗ ಕೋಪದಿಂದ ಏಳುತ್ತಾ ಆಕಳಿಸುತ್ತಾನೆ. ಆಕಳಿಕೆಯಿಂದ ಒಬ್ಬ ಸುಂದರಾಂಗ ಹುಟ್ಟುತ್ತಾನೆ. ನನಗೆ ಇರೋದಕ್ಕೆ ಜಾಗ ಕೊಡು. ಹಸಿದಿದ್ದೇನೆ. ಆಹಾರ ಕೊಡು. ನನಗೊಂದು ಹೆಸರನ್ನೂ ಇಡು ಎನ್ನುತ್ತಾನೆ.

ಆಗ ಬ್ರಹ್ಮ, 'ನೀನು ಕೆಂಪಗಿದ್ದೀಯ. ಹಾಗಾಗ ಸಿಂಧೂರ ಎಂದು ನಿನ್ನ ಹೆಸರು. ನೀನು ಬಲಶಾಲಿ ಇದ್ದೀಯ. ಯಾರನ್ನಾದ್ರೂ ತಬ್ಬಿಕೊಂಡರೆ ಅವರು 100 ಹೋಳುಗಳಾಗುತ್ತಾರೆ. ಇನ್ನು ನೀನು ಇಷ್ಟಪಟ್ಟಿದ್ದೆಲ್ಲಾ ನಿನ್ನ ಜಾಗ ಎಂದು ವರವನ್ನು ನೀಡುತ್ತಾನೆ. ಆಗ ಸಿಂಧೂರ, ಬ್ರಹ್ಮಾ, ನಿನ್ನನ್ನು ಒಮ್ಮೆ ತಬ್ಬಿಕೊಳ್ಳಬೇಕಲ್ಲ ಎಂದು ಕೇಳುತ್ತಾನೆ. ಹೆದರಿ ಬ್ರಹ್ಮ ಶಿವನ ಬಳಿ ಓಡಿ ಹೋಗುತ್ತಾನೆ. ಆಗ ಶಿವ - ಸಿಂಧೂರನ ನಡುವೆ ಯುದ್ಧವಾಗುತ್ತದೆ. ಸಿಂಧೂರ ಓಡಿ ಪರಾರಿಯಾಗುತ್ತಾನೆ. ಆಗ ಗಣಪತಿ ಪಾರ್ವತಿಗೆ ಹೇಳುತ್ತಾನೆ. ಅಮ್ಮಾ, ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಸಿಂಧೂರನನ್ನು ಸಂಹರಿಸುತ್ತೇನೆ ಎಂದು. ಮುಂದೆ ಪಾರ್ವತಿ ಹೊಟ್ಟೆಯಲ್ಲಿ ಹುಟ್ಟುತ್ತಾನೆ.