ತಮ್ಮ ಹುಟ್ಟಿನ ಮೂಲ ಆದಿಶಕ್ತಿ ಎಂದು ತಿಳಿದಾಗ ಮಧುಕೈಟಭರು ಮಾಡುವುದೇನು..?

ಶ್ರೀ ದೇವಿ ಭಾಗವತ ಶ್ರವಣದಿಂದ ಬುದ್ದಿಶಕ್ತಿ ಚುರುಕಾಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗುತ್ತಿದೆ. ಮಧುಕೈಟಭರ ಚರಿತ್ರೆಯನ್ನು ಸೂತರು ಹೇಳುತ್ತಾ ಹೋಗುತ್ತಾರೆ. ಒಮ್ಮೆ ಜಲಪ್ರಳಯವಾಗಿ ಭೂಮಿ ಮುಳುಗಿ ಹೋಗುತ್ತದೆ. ಆಗ ಮಧುಕೈಟಭರು ಎಂಬ ರಾಕ್ಷಸರು ಹುಟ್ಟುತ್ತಾರೆ. ಬೆಳೆದು ದೊಡ್ಡವರಾಗುತ್ತಾರೆ. 

Share this Video
  • FB
  • Linkdin
  • Whatsapp

ಶ್ರೀ ದೇವಿ ಭಾಗವತ ಶ್ರವಣದಿಂದ ಬುದ್ದಿಶಕ್ತಿ ಚುರುಕಾಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗುತ್ತಿದೆ. ಮಧುಕೈಟಭರ ಚರಿತ್ರೆಯನ್ನು ಸೂತರು ಹೇಳುತ್ತಾ ಹೋಗುತ್ತಾರೆ. ಒಮ್ಮೆ ಜಲಪ್ರಳಯವಾಗಿ ಭೂಮಿ ಮುಳುಗಿ ಹೋಗುತ್ತದೆ. ಆಗ ಮಧುಕೈಟಭರು ಎಂಬ ರಾಕ್ಷಸರು ಹುಟ್ಟುತ್ತಾರೆ. ಬೆಳೆದು ದೊಡ್ಡವರಾಗುತ್ತಾರೆ. ಒಮ್ಮೆ ಅವರಿಗೆ ಅವರ ಹುಟ್ಟಿನ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಯಾವುದೋ ಒಂದು ಶಕ್ತಿ ನಮ್ಮನ್ನು ಸೃಷ್ಟಿಸಿದೆ ಎಂದು ಅರಿವಾಗುತ್ತದೆ. ಆ ಶಕ್ತಿಯನ್ನು ಕುರಿತು ತಪಸ್ಸು ಮಾಡುತ್ತಾರೆ. ದೇವಿ ಪ್ರಸನ್ನಳಾಗಿ, ಏನು ವರ ಬೇಕು ಕೇಳಿ ಎನ್ನುತ್ತಾಳೆ. ಆಗ ಅವರು ಅಮ್ಮಾ ನಮಗೆ ಇಚ್ಛಾಮರಣ ಕರುಣಿಸು ತಾಯಿ ಎನ್ನುತ್ತಾರೆ. ತಥಾಸ್ತು ಎಂದು ಹೇಳಿ ಮಾಯವಾಗುತ್ತಾಳೆ. ಮುಂದೆ ಈ ರಾಕ್ಷಸರ ಸಂಹಾರ ಯಾವ ರೀತಿ ಆಗುತ್ತದೆ..?

Related Video