Asianet Suvarna News Asianet Suvarna News

ಇಂದ್ರನ ಬ್ರಹ್ಮಹತ್ಯಾ ದೋಷಕ್ಕೂ, ಸ್ತ್ರೀಯರು ಋತುಮತಿಯಾಗೋದಕ್ಕೂ ಸಂಬಂಧವೇನು?

ಒಮ್ಮೆ ಇಂದ್ರನಿಗೆ ಬ್ರಹ್ಮ ಹತ್ಯಾ ದೋಷ ಬಂದು ಬಿಡುತ್ತದೆ. ಒಂದು ವರ್ಷ ಕಳೆದರೂ ದೋಷ ಪರಿಹಾರ ಆಗಲಿಲ್ಲ. ಕೊನೆಗೆ ಈ ದೋಷವನ್ನು 4 ಭಾಗ ಮಾಡಿ, ನಾಲ್ಕು ಜನರಿಗೆ ಹಂಚುತ್ತಾರೆ. ಒಂದು ಭಾಗ ಭೂಮಿಗೆ, ಅದು ಬಂಜರು ಭೂಮಿ, ಇನ್ನೊಂದು ಭಾಗವನ್ನು ನೀರಿಗೆ ಕೊಡುತ್ತಾನೆ. 

First Published Dec 30, 2020, 5:18 PM IST | Last Updated Dec 30, 2020, 5:18 PM IST

ಒಮ್ಮೆ ಇಂದ್ರನಿಗೆ ಬ್ರಹ್ಮ ಹತ್ಯಾ ದೋಷ ಬಂದು ಬಿಡುತ್ತದೆ. ಒಂದು ವರ್ಷ ಕಳೆದರೂ ದೋಷ ಪರಿಹಾರ ಆಗಲಿಲ್ಲ. ಕೊನೆಗೆ ಈ ದೋಷವನ್ನು 4 ಭಾಗ ಮಾಡಿ, ನಾಲ್ಕು ಜನರಿಗೆ ಹಂಚುತ್ತಾರೆ. ಒಂದು ಭಾಗ ಭೂಮಿಗೆ, ಅದು ಬಂಜರು ಭೂಮಿ, ಇನ್ನೊಂದು ಭಾಗವನ್ನು ನೀರಿಗೆ ಕೊಡುತ್ತಾನೆ. ಅದು ನೀರಿನ ಮೇಲಿನ ಗುಳ್ಳೆ ರೂಪದಲ್ಲಿ ಇರುತ್ತದೆ, ಮೂರನೇ ಭಾಗವನ್ನು ವೃಕ್ಷಕ್ಕೆ ಕೊಡುತ್ತಾನೆ. ಅದು ಅಂಟು ರೂಪದಲ್ಲಿ ಸೇರುತ್ತದೆ. ನಾಲ್ಕನೇ ಭಾಗವನ್ನು ಸ್ತ್ರೀಯರಿಗೆ ಕೊಡುತ್ತಾನೆ. ಅದುಉ ಪ್ರತಿ ತಿಂಗಳು ರಜೋದೋಷ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೊನೆಗೆ ಬ್ರಹ್ಮಹತ್ಯಾ ದೋಷದಿಂದ ಮುಕ್ತನಾದ ಇಂದ್ರ ಸ್ವರ್ಗ ಸೇರುತ್ತಾನೆ.