Asianet Suvarna News Asianet Suvarna News

ಮಂತ್ರಾಲಯ ಮಠ ಗುರುತೇ ಸಿಗದಷ್ಟು ಬದಲು; ಮನ ಸೆಳೆವ ಸ್ಪೆಶಲ್ ಕಾರಿಡಾರ್‌

ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಮಂತ್ರಾಲಯ ಮಠದ ಆವರಣದ ಲುಕ್ಕನ್ನೇ ಬದಲಿಸಲಾಗಿದೆ. ಶ್ರೀ ಕ್ಷೇತ್ರ ಸಂಪೂರ್ಣ ಸ್ವರ್ಗಸದೃಶ ರೀತಿಯಲ್ಲಿ ಕಳೆಗಟ್ಟಿದೆ. 

ನೀವು ಮಂತ್ರಾಲಯಕ್ಕೆ ಹಲವಾರು ಬಾರಿ ಹೋಗಿರಬಹುದು. ಆದರೆ, ಈ ಬಾರಿ ಹೋದರೆ ಮಾತ್ರ ನಿಮಗೆ ಗುರುತೇ ಸಿಗದಷ್ಟು ಮಠದ ಚಿತ್ರಣ ಬದಲಾಗಿದೆ. ಮಠದ ಆವರಣದಲ್ಲಿ ಭಕ್ತಿ ಮನಸ್ಸಿನೊಳಗೆ ಮೈಗೂಡುವಂತೆ ಕಾರಿಡಾರ್‌ನ ಲುಕ್ ಬದಲಿಸಲಾಗಿದೆ. ಶ್ರೀಮಠಕ್ಕೆ ಬರುವ ಭಕ್ತರ ಓಡಾಟಕ್ಕೆ ಅನುಕೂಲವಾಗಲಿ, ಮತ್ತು ರಾಘವೇಂದ್ರ ಮಠದ ಖ್ಯಾತಿಗನುಗುಣವಾಗಿ ಹೊರಾಂಗಣದಲ್ಲಿ ಬದಲಾವಣೆ ತರಲಾಗಿದೆ. ಹೌದು, ಮಂತ್ರಾಲಯದಲ್ಲಿ ಆಗಸ್ಟ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ನಡೆಯುವ ರಾಯರ 351ನೇ ಆರಾಧನಾ ಮಹೋತ್ಸವ ಪ್ರಯುಕ್ತ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನಲೆಯಲ್ಲಿ ಅಲಂಕಾರವೂ ಭರ್ಜರಿಯಾಗಿದೆ. 

ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಸಂಭ್ರಮ

ರಾಯರ ಉತ್ತರಾಧನೆ ‌ರಥೋತ್ಸವ ವೇಳೆಯಲ್ಲಿ ನೆರೆವ ಸಾವಿರಾರು ಭಕ್ತರ ಓಡಾಟಕ್ಕೆ ಅಡಚಣೆ ಆಗುತ್ತಿತ್ತು. ‌ಇದನ್ನ ಗಮನಿಸಿದ ಮಂತ್ರಾಲಯ ‌ಮಠ, ಈ ಬಾರಿ ವಿಶಾಲ ಪ್ರದೇಶದ ಕಾರಿಡಾರ್ ನಿರ್ಮಾಣ ಮಾಡಿದೆ. 140 ಅಡಿ ಅಗಲ ಇರುವ ಕಾರಿಡಾರ್ ‌ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ‌ಕಾರಿಡಾರ್ ನಲ್ಲಿ ತೊಡಕಿಲ್ಲದೆ ಓಡಾಟ ಮಾಡಬಹುದಾಗಿದೆ. ಈ ಬಗ್ಗೆ ವಿವರ ನೋಡೋಣ ಬನ್ನಿ.. 

Video Top Stories