Asianet Suvarna News Asianet Suvarna News

ಸಮುದ್ರ ಮಥನದಲ್ಲಿ ರಾಕ್ಷಸರ ಪಾಲಾಗಿದ್ದ ಅಮೃತ ಕಲಶವನ್ನು ಶ್ರೀಹರಿ ಉಪಾಯವಾಗಿ ಪಡೆದಿದ್ಹೀಗೆ

ದಾನವರು- ದೇವತೆಗಳ ನಡುವೆ ಅಮೃತಕ್ಕಾಗಿ ಕ್ಷೀರ ಸಾಗರ ಮಥನ ಶುರುವಾಗುತ್ತದೆ. ಮೊದಲು ಸಮುದ್ರದಿಂದ ಹಾಲು, ತುಪ್ಪಗಳು ಹುಟ್ಟುತ್ತವೆ. ಇದನ್ನು ನೋಡಿ ದೇವತೆಗಳು ಬ್ರಹ್ಮದೇವನಲ್ಲಿ ಹೇಳುತ್ತಾರೆ. 

ದಾನವರು- ದೇವತೆಗಳ ನಡುವೆ ಅಮೃತಕ್ಕಾಗಿ ಕ್ಷೀರ ಸಾಗರ ಮಥನ ಶುರುವಾಗುತ್ತದೆ. ಮೊದಲು ಸಮುದ್ರದಿಂದ ಹಾಲು, ತುಪ್ಪಗಳು ಹುಟ್ಟುತ್ತವೆ. ಇದನ್ನು ನೋಡಿ ದೇವತೆಗಳು ಬ್ರಹ್ಮದೇವನಲ್ಲಿ ಹೇಳುತ್ತಾರೆ. ಬಹಳ ಕಾಲದಿಂದ ಮಥಿಸುತ್ತಿದ್ದರೂ ಅಮೃತ ಸಿಗುತ್ತಿಲ್ಲವಲ್ಲ ದೇವ ಎಂದು ಅಳಲು ತೋಡಿಕೊಳ್ಳುತ್ತಾರೆ.

ಮಹಾಭಾರತ: ಗುರುಪತ್ನಿಯ ಆಜ್ಞೆ ಪಾಲಿಸಿದ ಉತ್ತುಂಗ, ಮನೆಗೆ ಹೋಗಲು ಗುರುಗಳಿಂದ ಸಿಕ್ತು ಅನುಮತಿ

ಆಗ ಬ್ರಹ್ಮದೇವ ದೇವತೆಗಳಿಗೆ ಅಭಯ ನೀಡುತ್ತಾನೆ. ಮತ್ತೆ ಮಥನ ಶುರುವಾಗುತ್ತದೆ. ಹೀಗೆ ಬಹಳ ಕಾಲ ಮಥನದ ಬಳಿಕ ಹಾಲಾಹಲ ಹುಟ್ಟುತ್ತದೆ. ದೇವತೆಗಳೆಲ್ಲರೂ ಈಶ್ವರನನ್ನು ಪ್ರಾರ್ಥಿಸುತ್ತಾರೆ. ಈಶ್ವರ ಹಾಲಹಲವನ್ನು ಕುಡಿದು ನೀಲಕಂಠ ಎನಿಸಿಕೊಳ್ಳುತ್ತಾನೆ. ಬಳಿಕ ಅಮೃತ ಹಿಡಿದ ಧನ್ವಂತರಿ ಹುಟ್ಟುತ್ತಾನೆ. ರಾಕ್ಷಸರು ಅಮೃತ ಕಲಶವನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ. ಆಗ ಶ್ರೀಹರಿ ಮೋಹಿನಿ ರೂಪ ತಾಳಿ ರಾಕ್ಷಸರನ್ನು ವಂಚಿಸಿ ಅಮೃತ ಕಲಶವನ್ನು ದೇವತೆಗಳಿಗೆ ಕೊಡುತ್ತಾನೆ. 

Video Top Stories