ಶ್ರೀರಾಮ‌ ನವಮಿ ಹಿನ್ನೆಲೆ ರಾಜ್ಯದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಯುವ ಘಟಕಗಳಿಂದ ಎಲ್ಲೆಡೆ ಶೋಭಾಯಾತ್ರೆ ಕೈಗೊಳ್ಳಲಾಯಿತು. 

Share this Video
  • FB
  • Linkdin
  • Whatsapp

ಬೆಂಗಳೂರಿನ ರಾಮ ದೇವಾಲಯ(Sri Ram temple)ಗಳಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಇಂದು ವಿಶೇಷ ಪೂಜೆ ನೆರವೇರಿತು. ಇದಲ್ಲದೆ, ಎಲ್ಲೆಡೆ ಶೋಭಾಯಾತ್ರೆಗೆ ಚಾಲನೆ ದೊರೆಯುತ್ತಿದೆ. ಕಲಬುರಗಿಯಲ್ಲಿ ರಾಮನವಮಿ ಪ್ರಯುಕ್ತ 15 ಅಡಿ ಎತ್ತರದ ರಾಮನ ಮೂರ್ತಿಯನ್ನು ಹಿಡಿದು ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಈ ಶೋಭಾಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಇನ್ನು ಬಾಗಲಕೋಟೆಯಲ್ಲೂ ರಾಮನವಮಿ ಸಡಗರ ಜೋರಾಗಿತ್ತು. ಇಲ್ಲಿನ ದೇಗುಲ ಕೇಸರಿ ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದು, ಜೈ ಶ್ರೀ ರಾಮ್ ಘೋಷಣೆ ಮೊಳಗಿತು. 

Ram Navami: ದಿನವಿಡೀ ರಾಮ ಸ್ಮರಣೆ ಮಾಡಿದರೆ ಯಶಸ್ಸು ಪ್ರಾಪ್ತಿ

ರಾಮನವಮಿ ಪ್ರಯುಕ್ತ ದಾವಣಗೆರೆಯ ಶ್ರೀರಾಮ ಮಂದಿರದಲ್ಲಿ ಕೂಡಾ ವಿಶೇಷ ಪೂಜೆಗಳು ನಡೆದವು. ತುಮಕೂರಿನಲ್ಲಿ ಯುವಕಾಂಗ್ರೆಸ್‌ ವತಿಯಿಂದ ಕೇಸರಿ ಶಲ್ಯ ಹಾಕಿಕೊಂಡು ರಾಮನವಮಿ ಆಚರಿಸಲಾಯಿತು. ಕೇಸರಿ ಟೋಪಿ ಧರಿಸಿ ಮುಸ್ಲಿಂ ಕಾರ್ಯಕರ್ತರು ಕೂಡಾ ರಾಮನವಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

Related Video