ಕುಂಭ ರಾಶಿಗೆ ಶನಿ; ಈ 3 ರಾಶಿಗೆ ಕಾಡಿಸಿ ಪೀಡಿಸಿ ಹಿಂಡಿ ಹಿಪ್ಪೆ ಮಾಡುವ ಶನೈಶ್ಚರ!

ಜನವರಿ 17ರಂದು ಕುಂಭ ರಾಶಿಗೆ ಶನಿ ಪ್ರವೇಶಿಸುತ್ತಿದ್ದಾನೆ. ಮೊದಲೇ 17 ಅಂದರೆ ಏಳುಬೀಳು.. ಶನಿಯ ಈ ರಾಶಿ ಬದಲಾವಣೆಯು ಮೂರು ರಾಶಿಗಳಿಗೆ ಬಹಳಷ್ಟು ಗಂಡಾಂತರ ತರಲಿದೆ.

Share this Video
  • FB
  • Linkdin
  • Whatsapp

ಸಾಡೇಸಾತ್ ಅಂದ್ರೆ ಶನಿಯು ಕುಜನ ಜೊತೆ ಎರಡೂವರೆ ವರ್ಷ, ಎರಡೂವರೆ ವರ್ಷ ಕೇತು ಜೊತೆ, ಎರಡೂವರೆ ವರ್ಷ ರಾಹು ಜೊತೆ ಸೇರಿ ಗಂಡಾಂತರ ತರುವ ಕಾಲ. ಕೇತು ಜೊತೆ ಇದ್ದಾಗ ಏನೆಲ್ಲ ಸಮಸ್ಯೆಗಳು, ರಾಹು ಜೊತೆ ಇದ್ದಾಗ ಯಾವ ಸಮಸ್ಯೆಗಳು ಹಾಗೂ ಕುಜನ ಜೊತೆ ಶನಿ ಇದ್ದಾಗ ಯಾವ ಸಮಸ್ಯೆಗಳು ಎದುರಾಗುತ್ತವೆ, ಎಂಥೆಂಥ ಕಷ್ಟಕೋಟಲೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸಿದ್ದಾರೆ. 
ಜೀವಮಾನದಲ್ಲಿ ಸಾಡೇಸಾತ್ ಮೂರು ಬಾರಿ ಬರಬಹುದು. ಮೊದಲು ಬಂದಾಗ ದಂಡಂ ದಶಗುಣಂ, ಎರಡನೇ ಬಾರಿ ಬಂದಾಗ ಧನ ಕೀರ್ತಿಗಳನ್ನು ಕೊಟ್ಟರೆ, ಮೂರನೇ ಬಾರಿ ಬಂದಾಗ ಶನೀಶ್ಚರ ಮುಕ್ತಿ ಕೊಡುತ್ತಾನೆ. ಜನ್ಮಶನಿ, ಪಂಚಮ ಶನಿ, ಅಷ್ಟಮ ಶನಿ, ಶನಿದಶೆ, ಸಾಡೇಸಾತಿ ಸಮಯದಲ್ಲಿ ಏನೆಲ್ಲ ಕಷ್ಟಗಳು ಎದುರಾಗುತ್ತವೆ, ಇದೀಗ ಶನಿ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರಿಂದ ಯಾರೆಲ್ಲ ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನೂ ಗುರೂಜಿಗಳ ಮಾತಲ್ಲಿ ಕೇಳೋಣ. 

ಶಂಕರನನ್ನೂ ಬಿಡದ ಶನೈಶ್ಚರ.. ಇನ್ನು 9 ದಿನದಲ್ಲಿ ಕುಂಭದಲ್ಲಿ ಶನಿ ಗೋಚಾರ!

Related Video