ಕುಜ-ರಾಹು ಗಂಡಾಂತರದಿಂದ ಅಪಾಯ; ರಾಜಕೀಯ ನಾಯಕರಿಗೆ ಕಂಟಕ..!

ಕುಜ ರಾಹು ಗಂಡಾಂತರದಿಂದ ಅಪಾಯವಾಗುತ್ತದೆ, ಮುಂದಿನ 2 ತಿಂಗಳು ಕುಜನ ಪ್ರತಾಪವು ಜಾಸ್ತಿಯಾಗುತ್ತದೆ ಎಂದು ಡಾ. ಹರೀಶ್‌ ಕಶ್ಯಪ್‌ ತಿಳಿಸಿದ್ದಾರೆ. ಇಂದಿನಿಂದ ಅಕ್ಟೋಬರ್‌ 3ವರೆಗೂ ಕುಜ ಕನ್ಯಾಚಾರ ಕಾಲ, ಕರ್ಮ, ಅಧಿಕಾರ ಬಲಗಳಿಂದ ಸಂಕಷ್ಟ ಇರಲಿದೆ ಎಂದು ಅವರು ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ನವೆಂಬರ್‌ 4ರವರೆಗೂ ಶನಿಯ ವಕ್ರೀಗತಿ ಇರಲಿದೆ ಹಾಗೂ ಆಗಸ್ಟ್‌ 23ರಿಂದ ಸೆಪ್ಟೆಂಬರ್ ‌15ರವರೆಗೆ ಬುಧ ವಕ್ರೀಗತಿ ಇರಲಿದೆ ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್‌ ಕಶ್ಯಪ್‌ ತಿಳಿಸಿದ್ದಾರೆ. ಇದರಿಂದ ವಿವಿಧ ದೇಶಗಳ ನಾಯಕರಿಗೆ ಕಂಟಕ ಆಗಲಿದೆ. ಶನಿವಕ್ರೀ ಬಿಡುವವರಿಗೂ ರಾಜಕೀಯ ಅವ್ಯವಹಾರ, ಅವ್ಯವಸ್ಥೆಯಿಂದ ಕೂಡಿರುತ್ತದೆ. ಜಗತ್ತಿನಲ್ಲಿ ಜನಾಂಗೀಯ ಕಲಹಗಳು ಉಲ್ಬಣ ಆಗಲಿವೆ. ಬೆಲೆ ಏರಿಕೆ, ಉತ್ಪಾದನಾ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.

Related Video