ಇದು ಎಷ್ಟನೇ ದಸರಾ, ಅರಮನೆ ಹೆಸರೇನು: ದಸರಾಕ್ಕೆ ಬಂದ ಜನ ಕೊಟ್ಟ ಉತ್ತರವೇನು ಗೊತ್ತಾ?

ಬೀದಿ ಬೀದಿಗಳಿಗೂ ಲೈಟಿನ ಸಿಂಗಾರ! ಮೂಲೆ ಮೂಲೆಯಲ್ಲೂ ಒಂದೊಂದು ಕಾರ್ಯಕ್ರಮ, ಥೇಟ್ ಮದುವಣಗಿತ್ತಿಯೇ ಆಗಿಬಿಟ್ಟಿದೆ ನಮ್ಮ ಮೈಸೂರು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿರೋ ದಸರಾ ಸಂಭ್ರಮ ನೋಡೋಕೆ ಎರಡು ಕಣ್ಣು ಸಾಲೋದೇ ಇಲ್ಲ ಬಿಡಿ. ಹಾಗೆ ಮಿಂಚ್ತಾ ಇದೆ ಮೈಸೂರು.

Share this Video
  • FB
  • Linkdin
  • Whatsapp

ಮೈಸೂರು (ಅ.05): ಬೀದಿ ಬೀದಿಗಳಿಗೂ ಲೈಟಿನ ಸಿಂಗಾರ! ಮೂಲೆ ಮೂಲೆಯಲ್ಲೂ ಒಂದೊಂದು ಕಾರ್ಯಕ್ರಮ, ಥೇಟ್ ಮದುವಣಗಿತ್ತಿಯೇ ಆಗಿಬಿಟ್ಟಿದೆ ನಮ್ಮ ಮೈಸೂರು! ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿರೋ ದಸರಾ ಸಂಭ್ರಮ ನೋಡೋಕೆ ಎರಡು ಕಣ್ಣು ಸಾಲೋದೇ ಇಲ್ಲ ಬಿಡಿ. ಹಾಗೆ ಮಿಂಚ್ತಾ ಇದೆ ಮೈಸೂರು. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಮೈಸೂರಿನ ದಸರಾಕ್ಕೆ ಆಗಮಿಸಿರುವ ಜನರ ಬಳಿ ಹೋಗಿ ಮೈಸೂರಿನ ಬಗ್ಗೆ, ಹಾಗೂ ಮೈಸೂರು ಅರಮನೆ ಹೆಸರು, ರಾಜಮಾತೆಯ ಹೆಸರು ಸೇರಿದಂತೆ ಇದು ಎಷ್ಟನೇ ದಸರಾ ಎಂಬ ಪ್ರಶ್ನೆಗಳನ್ನು ಜನರ ಬಳಿ ಕೇಳಿದ್ದು, ಈ ಪ್ರಶ್ನೆಗೆ ಜನರು ಕೂಡಾ ಅಷ್ಟೇ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ನೀವು ಕೂಡಾ ಈ ವಿಡಿಯೋವನ್ನು ವೀಕ್ಷಿಸಿ ಎಂಜಾಯ್ ಮಾಡಿ...

Related Video