
ರಾಹು ಜೊತೆ ಕುಜ ಸೇರೋ ಕಾಲ: ಯಾವ ರಾಶಿಗೇನು ಲಾಭ?
ಜೂನ್ 26ರಿಂದ ಮೇಷ ರಾಶಿಯಲ್ಲಿ ರಾಹು- ಮಂಗಳನ ಸಂಯೋಗ ಉಂಟಾಗುತ್ತಿದೆ. ಕುಜವು ತನ್ನ ಸ್ವರಾಶಿಗೆ ಬರುತ್ತಿರುವ ಹಾಗೂ ರಾಹುವಿನೊಂದಿಗೆ ಇರುವ ಈ ಸಮಯ ಯಾವ ರಾಶಿಯ ಫಲವೇನು? ಪಂಡಿತರಾದ ಹರೀಶ್ ಕಶ್ಯಪ್ ತಿಳಿಸಿಕೊಡುತ್ತಾರೆ..
ಅಗ್ನಿ ಅಂಶದ ಅಂಶವಾದ ಮಂಗಳ(Mars)ವು ನೀರಿನ ಅಂಶ ಮೀನ ರಾಶಿ(Pisces)ಯನ್ನು ಬಿಟ್ಟು ಅಗ್ನಿ ಅಂಶವಾದ ಹಾಗೂ ಸ್ವರಾಶಿಯಾದ ಮೇಷ ರಾಶಿಯನ್ನು ಜೂನ್ 27ರ ಬೆಳಿಗ್ಗೆ ಪ್ರವೇಶಿಸುತ್ತದೆ. ಅಲ್ಲಿ ಈಗಾಗಲೇ ಇರುವ ರಾಹು(Rahu) ಜೊತೆ ಮಂಗಳನ ಸಂಯೋಗ(conjunction) ನಡೆಯುತ್ತಿದೆ. ಈ ಎರಡು ಗ್ರಹಗಳ ದ್ಯುತಿಯಿಂದ ಯಾವ ರಾಶಿಯ ಮೇಲೆ ಏನೆಲ್ಲ ಪರಿಣಾಮವಾಗಲಿದೆ ಎಂಬುದನ್ನು ಪ್ರಾಜ್ಞರಾದ ಹರೀಶ್ ಕಶ್ಯಪ್ ತಿಳಿಸಿದ್ದಾರೆ.
Zodiac signs: ಇವರಿಗೆ ಸಂಬಂಧಗಳಲ್ಲಿ ಆತಂಕ, ಒತ್ತಡ ಹೆಚ್ಚು
ಈ ಯೋಗವು ಆಗಸ್ಟ್ 10ರಂದು ಬುಧವಾರ ರಾತ್ರಿ 9.08ಕ್ಕೆ ವೃಷಭ ರಾಶಿ(Taurus)ಗೆ ಮಂಗಳನ ಪ್ರವೇಶದೊಂದಿಗೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಮಂಗಳ ಗ್ರಹ ತನ್ನ ಸಂಪೂರ್ಣ ಪ್ರಭಾವ ಬೀರಲಿದೆ. ಏಕೆಂದರೆ ಮೇಷವು ಅಂಗಾರಕನ ರಾಶಿಯಾಗಿದ್ದು, ಯಾವುದೇ ಗ್ರಹವು ತನ್ನದೇ ಆದ ರಾಶಿಚಕ್ರ(Zodiac signs)ದಲ್ಲಿ ತನ್ನ ಸಂಪೂರ್ಣ ಪ್ರಭಾವ ಬೀರಲು ಶಕ್ತವಾಗಿರುತ್ತದೆ.