ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
ಧರ್ಮ ರಕ್ಷಣೆ ಮತ್ತು ಅಧ್ಯಾತ್ಮ ಸಾಧನೆಯಲ್ಲಿ ನಿರತರಾಗಿರುವ ನಾಗಾ ಸಾಧುಗಳು ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಒಂದು ನಿರ್ದಿಷ್ಟ ದಿನದಂದು ಮಾತ್ರ ಎಲ್ಲರೂ ಒಂದೆಡೆ ಸೇರುತ್ತಾರೆ. ಈ ಸಾಧುಗಳ ನಿಗೂಢ ಜೀವನದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
ನಾವಿವತ್ತು ಈ ನಾಗಾಸಾಧುಗಳ ನಿಗೂಢ ಜಗತ್ತು ಹೇಗಿರುತ್ತೆ ಅನ್ನೋದನ್ನ ತಿಳ್ಕೊಳೋ ಪ್ರಯತ್ನ ಮಾಡೋಣ. ಧರ್ಮದ ರಕ್ಷಣೆ, ಅಧ್ಯಾತ್ಮ ಸಾಧನೆ, ಈ ನಾಗಾಸಾಧುಗಳ ಮುಖ್ಯ ಆದ್ಯತೆ. ಆದ್ರೆ, ಜನರ ಹಿತ ಬಯಸೋ ಈ ಸಾಧುಗಳು, ನಿರ್ಜನ ಪ್ರದೇಶದಲ್ಲಿರ್ತಾರೆ. ಲೋಕಕ್ಕೆ ಒಳ್ಳೇದಾಗ್ಲಿ ಅಂತ ಸಾದಾ ಧ್ಯಾನ ಮಾಡೋ ಸಂತರು, ಯಾರ ಕಣ್ಣಿಗೂ ಬೀಳದ ಹಾಗಿರ್ತಾರೆ. ಆದ್ರೆ, ಅದೊಂದು ದಿನ ಮಾತ್ರ, ಎಲ್ಲೇ ಇದ್ರೂ ಹೇಗೆ ಇದ್ರೂ, ಆ ಸ್ಥಳಕ್ಕೆ ಬಂದೇ ಬರ್ತಾರೆ. ಹಾಗಾದ್ರೆ ಆ ದಿನದ ವಿಶೇಷ ಏನು? ಅವರು ಬರೋ ಆ ಸ್ಥಳ ಯಾವ್ದು? ಅದರ ಹಿಂದಿರೋ ನಿಗೂಢ ರಹಸ್ಯವೇನು?
ಈ ನಾಗಾಸಾಧುಗಳ ಬಗ್ಗೆ ಎಷ್ಟೆಲ್ಲಾ ವಿಚಾರ ತಿಳ್ಕೊಂಡ ಮೇಲೂ, ಇನ್ನೂ ಸಾಗರದಷ್ಟು ಸಂಗತಿಗಳು ರಹಸ್ಯವಾಗೇ ಉಳೀತಾವೆ. ನಾಗಾ ಸಾಧುಗಳದ್ದು ನಿಜಕ್ಕೂ ನಿಗೂಢ ಲೋಕ.ಅದರೊಳಗೆ ಏನಾಗುತ್ತೆ, ಹೇಗಿರುತ್ತೆ ಅನ್ನೋದು, ಹೊರ ಜಗತ್ತಿಗೆ ಗೊತ್ತಾಗೋದೇ ಅಸಾಧ್ಯ. ಅಷ್ಟಕ್ಕೂ ಆ ಸಾಧುಗಳು ನಿಗೂಢವಾಗಿ ಉಳಿಯೋದೇಕೆ? ಅವರ ಬಗ್ಗೆ ನಮಗೆ ಗೊತ್ತಿರೋದೆಷ್ಟು?
ಕುಂಭಮೇಳದಲ್ಲಿ ಯಾವ ಸನ್ಯಾಸಿ ದರ್ಶನ ಮಾಡಿದ್ರೂ, ಅವರು ಸಾಮಾನ್ಯರ ಹಾಗೆ ಕಾಣೋದಿಲ್ಲ. ಅವರ ಸುತ್ತಲೂ ವಿಶಿಷ್ಠ ದೈವಿಕತೆ, ವಿಚಿತ್ರ ಆಕರ್ಷಣೆ ಉಂಟಾಗುತ್ತೆ. ಕುಂಭಮೇಳದಲ್ಲಿ ಬರೀ ನಾಗಾ ಸಾಧುಗಳು ಮಾತ್ರವೇ ಅಲ್ಲ, ಚಿತ್ರವಿಚಿತ್ರ ಹಠಯೋಗ ದೀಕ್ಷೆ ತೊಟ್ಟಿರೋ, ವಿಲಕ್ಷಣ ಸಾಧುಗಳ ದಿವ್ಯದರ್ಶನವೂ ಆಗುತ್ತೆ. ಅಂಥಾ ಸಾಧನೆಯ ಹಿಂದಿರೋ ಕತೆ ಏನು?