ಕರ್ನಾಟಕದಲ್ಲಿ ಪ್ರಭು ಶ್ರೀರಾಮನ ಹೆಜ್ಜೆ ಗುರುತು, ಸೀತೆಯನ್ನು ಹುಡುಕಿ ಬಂದ ರಾಮನ ಕುರುಹುಗಳು..!
ಶತಕೋಟಿ ಭಾರತಿಯರ ಕನಸಿನ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.. ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಭಾರತಿಯರು ಕಾತುರರಾಗಿದ್ದಾರೆ
ಶತಕೋಟಿ ಭಾರತಿಯರ ಕನಸಿನ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.. ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಭಾರತಿಯರು ಕಾತುರರಾಗಿದ್ದಾರೆ.. . ರಾಮಾಯಣದಲ್ಲಿ ಶ್ರೀರಾಮನ ವನವಾಸ ಅಯೋಧ್ಯೆಯಿಂದ ಶುರುವಾಗುತ್ತೆ.. ಅಲ್ಲಿಂದ ಹೊರಟವನು ಬದುಕಿನಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಾ ಸಾಗುತ್ತಾನೆ. ದಂಡಕಾರಣ್ಯದಲ್ಲಿ ಹೆಂಡತಿಯನ್ನೂ ಕಳೆದುಕೊಂಡು, ವೈದೇಹಿ ಏನಾದಳು ಅಂತ ಹುಡುಕುತ್ತಾ ಪಶ್ಚಿಮಘಟ್ಟದ ಮೂಲಕ ಕರ್ನಾಟಕಕ್ಕೆ ಪದಾರ್ಪಣೆ ಮಾಡುತ್ತಾನೆ.. ಸೀತಾ ಮಾತೆಯನ್ನ ಹುಡುಕುತ್ತ ಹೊರಟ ಪ್ರಭು ಶ್ರೀರಾಮನ ಹೆಜ್ಜೆಗಳು ಕರುನಾಡಿನಲ್ಲೂ ಮೂಡಿವೆ. ಕನ್ನಡ ನೆಲದ ಹಂಪಿಗೂ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಹಂಪಿಯ ಮಾಲ್ಯವಂತ ಪರ್ವತದಲ್ಲಿ ಶ್ರೀರಾಮ ಬಂದಿದ್ದ ಅನ್ನೋದಕ್ಕೆ ನೂರಾರು ಸಾಕ್ಷಿಗಳಿವೆ.. ಹಂಪಿಯ ಮಾಲ್ಯವಂತ ಪರ್ವತದಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳಿವೆ.. ಶ್ರೀರಾಮ ಮಾಲ್ಯವಂತ ಪರ್ವತದಲ್ಲಿ ಪೂಜೆ ಮಾಡಿದ ಹತ್ತಾರು ಲಿಂಗಗಳು ಗುಡ್ಡದ ಮೇಲೆ ಈಗಲೂ ಇವೆ..