Koppal: ಅಜ್ಜನ ಜಾತ್ರೆಯಲ್ಲಿ 15 ಲಕ್ಷ ಜೋಳದ ರೊಟ್ಟಿ, 30 ಟನ್ ಹೋಳಿಗೆ!
275 ಕ್ವಿಂಟಲ್ ಮಾದಲಿ, 10 ಕ್ವಿಂಟಲ್ ತುಪ್ಪ ಅಜ್ಜನ ಜಾತ್ರೆಯಲ್ಲಿ ಭಕ್ತ ಸಾಗರ!
ಗವಿಸಿದ್ದೇಶ್ವರ ಜಾತ್ರೆಗೆ ಸಾಗರದಂತೆ ಹರಿದು ಬಂದ ಭಕ್ತಗಣ
ಧ್ವಜಾರೋಹಣ ನೆರವೇರಿಸಿ ರಥೋತ್ಸವಕ್ಕೆ ಸದ್ಗುರು ಚಾಲನೆ..!
ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ
15 ಲಕ್ಷ ಜೋಳದ ರೊಟ್ಟಿ, 30 ಟನ್ ಹೋಳಿಗೆ, 275 ಕ್ವಿಂಟಲ್ ಮಾದಲಿ, 10 ಕ್ವಿಂಟಲ್ ತುಪ್ಪ.. ಗವಿಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರ ಮಹಾಪೂರ.. ಅಜ್ಜನ ಮೇಲೆ ಶ್ರದ್ಧೆ ಭರಪೂರ! ಅದ್ಭುತ ರಥೋತ್ಸವ ಅನನ್ಯ! ದಾಸೋಹ ಪರಂಪರೆ ಅವಿಸ್ಮರಣೀಯ! ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ನಾನಾ ಊರುಗಳಿಂದ ಗವಿಮಠದ ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಅಜ್ಜನ ದರ್ಶನ ಪಡೆದುಕೊಂಡರು. ಕೊರೊನಾ ನಂತರ ನಡೆದ ಅದ್ಧೂರಿ ಗವಿಸಿದ್ದೇಶ್ವರ ರಥೋತ್ಸವ ಎಲ್ಲರ ಗಮನ ಸೆಳೆಯಿತು. ಹಾಗಾದ್ರೆ ಅವಿಸ್ಮರಣೀಯ ರಥೋತ್ಸವ ವೈಭವದ ಬಗ್ಗೆ ನೋಡೋಣ.