
ಶನಿ ವಕ್ರಿ 2022: ದೇಶದಲ್ಲಿ ಹೆಚ್ಚುವ ಅರಾಜಕತೆ, ವ್ಯಸನ, ಧರ್ಮ ಸಂಘರ್ಷ
ಜೂನ್ 5ರಿಂದ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿಯು ಜುಲೈ 12ರಂದು ಮಕರ ರಾಶಿಯಲ್ಲಿ ವಕ್ರಿಯಾಗುತ್ತಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರುತ್ತಾನೆ. ಶನಿ ವಕ್ರಿಯ ಪರಿಣಾಮ ಯಾರ ಮೇಲೇನಾಗಲಿದೆ, ದೇಶದ ಮೇಲೇನಾಗಲಿದೆ ಎಂಬುದನ್ನು ದೈವಜ್ಞ ಡಾ.ಹರೀಶ್ ಕಶ್ಯಪ್ ತಿಳಿಸಿದ್ದಾರೆ.
ಯಾವುದೇ ಗ್ರಹಗಳು ಹಿಮ್ಮುಖ ಚಲನೆಯಲ್ಲಿರುವುದು ಒಳ್ಳೆಯದಲ್ಲ. ಯಾವಾಗಲೂ ಮುನ್ನಡೆಯ ಪ್ರಯಾಣ ಅಭಿವೃದ್ಧಿ ತರುತ್ತವೆ. ಹಿನ್ನಡೆಯ ಪ್ರಯಾಣ ಒಳಿತು ಮಾಡುವುದಿಲ್ಲ. ಸಧ್ಯ ಜೂನ್ 5ರಿಂದ ಶನಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಜುಲೈ 12ಕ್ಕೆ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ದೇಶದ ಮೇಲೆ, ವ್ಯಕ್ತಿಗಳ ಮೇಲೆ ಬಹಳ ಪ್ರಭಾವಶಾಲಿಯಾಗಿರುತ್ತದೆ.
ಜಾತಕದಲ್ಲಿ ಗೃಹ ಮೈತ್ರಿತ್ವ ಚೆನ್ನಾಗಿದ್ದರೆ ಮಾತ್ರ ಮದುವೆ ಮಾತು ಮುಂದುವರೆಯಲಿ!
ಶನಿಯು ರಾಜರಿಗೆ ಆಡಳಿತ ವರ್ಗಕ್ಕೆ ಹೆಚ್ಚು ಬಾಧೆ ಕೊಡುವನು. ಹೀಗಾಗಿ, ಅಧರ್ಮಿಗಳು , ಮ್ಲೇಚ್ಛರು , ಧರ್ಮ ನಿಂದಕರು ಮೇಲುಗೈ ಸಾಧಿಸುತ್ತಾರೆ, ಮರಣ ಮಾರಣದ ಭಯೋತ್ಪಾದಕ ಪೀಡೆ ಹೆಚ್ಚಳವಾಗುತ್ತದೆ ಎನ್ನುತ್ತಾರೆ ದೈವಜ್ಞ ಡಾ.ಹರೀಶ್ ಕಶ್ಯಪ್. ಈ ಕುರಿತ ವಿವರಗಳನ್ನು ತಿಳಿಯಲು ವಿಡಿಯೋ ನೋಡಿ.