ಮೇಷಕ್ಕೆ ಗುರು; ಈ ರಾಶಿಗಳಿಗೆ ಬರಲಿದೆ ಗುರುಬಲ; ದೇಶಕ್ಕೇನು ಫಲ?

ಏಪ್ರಿಲ್ 22ಕ್ಕೆ ಗುರು ಮೇಷ ರಾಶಿ ಪ್ರವೇಶ
6 ರಾಶಿಗಳಿಗೆ ಬರಲಿದೆ ಗುರುಬಲ
ಗುರುಬಲ ಇಲ್ಲದ, ಗುರುಬಾಧೆ ಹೊಂದಿರುವ ರಾಶಿಗಳಿಗೆ ಪರಿಹಾರವೇನು?
ದೇಶದ ಮೇಲೆ ಗುರುವಿನ ಮೇಷ ಸಂಚಾರದ ಪರಿಣಾಮವೇನು?

First Published Apr 16, 2023, 10:09 AM IST | Last Updated Apr 16, 2023, 2:30 PM IST

ಏಪ್ರಿಲ್ 22ರಂದು ಗುರು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಅಸ್ತನಾಗಿಯೇ ಮೇಷ ಪ್ರವೇಶಿಸಲಿದ್ದಾನೆ ಗುರು. ಶುಭ ಗ್ರಹ ಅಸ್ತವಾದರೆ ಅವರ ಬಲ ಕಡಿಮೆಯಾಗುತ್ತದೆ. ಆದರೆ, ಏಪ್ರಿಲ್ 28ರ ನಂತರ ಗುರು ಮತ್ತೆ ಉದಯಿಸುತ್ತಾನೆ ಎಂಬುದು ಸಂತಸದ ಸಂಗತಿ. ಗುರು 12 ರಾಶಿಗೆ ಒಮ್ಮೆ ಮೇಷಕ್ಕೆ ಬರುತ್ತಾನೆ. ಗುರುವಿನ ಈ ಬದಲಾವಣೆಯು ಎಲ್ಲ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ಮೇಷ ರಾಶಿಯಲ್ಲಿ ಗುರು ಪೂರ್ಣ ಶುಭ ಫಲ ಕೊಡಲು ಅಕ್ಟೋಬರ್ ಕಳೆಯಬೇಕು. ಸೆ.4ರಿಂದ ಡಿ.31ರ ವರೆಗೂ ಗುರು ವಕ್ರಿಯಾಗಿ ಮೇಷದಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಅಂದರೆ ಜೂ.19ರಿಂದ ಅ.4ರ ವರೆಗೂ ಶನಿ ಕೂಡಾ ಕುಂಭದಲ್ಲಿ ವಕ್ರಿಯಾಗಿರುತ್ತಾನೆ. ಗುರುವಿನ ಮೇಷ ಸಂಚಾರ ಸಮಯದಲ್ಲಿ ದೇಶದಲ್ಲಿ ಏನೆಲ್ಲ ಬದಲಾವಣೆಗಳನ್ನು ಕಾಣಬಹುದು, ಯಾವ ರಾಶಿಯವರಿಗೆ ಗುರುಬಲ ಬರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಜೊತೆಗೆ, ಗುರುಬಲ ಇಲ್ಲದವರು ಏನು ಪರಿಹಾರ ಮಾಡಬೇಕೆಂಬುದನ್ನೂ ತಿಳಿಸಿದ್ದಾರೆ. 

ವಾರ ಭವಿಷ್ಯ: ಕಟಕಕ್ಕಿದೆ ಆರ್ಥಿಕ ಲಾಭ, ವೃಶ್ಚಿಕಕ್ಕೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ

Video Top Stories