Jupiter Transit 2022: ಈ ರಾಶಿಗಳಿಗೆ ಬಂತು ಗುರುಬಲ
ಮೀನ ರಾಶಿಗೆ ಗುರುವಿನ ಪ್ರವೇಶದಿಂದ ಯಾವೆಲ್ಲ ರಾಶಿಗಳು ಏನು ಫಲ ಪಡೆಯುತ್ತವೆ, ಯಾರಿಗೆಲ್ಲ ಗುರುಬಲ ಸಿಗಲಿದೆ ಎಂಬುದನ್ನು ದೈವಜ್ಞ ಡಾ. ಹರೀಶ್ ಕಶ್ಯಪ ತಿಳಿಸಿಕೊಟ್ಟಿದ್ದಾರೆ.
ಈ ಹಿಂದೂ ವರ್ಷದ ಮೊದಲ ತಿಂಗಳು ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ಅಪರೂಪದ ತಿಂಗಳಾಗಿದೆ. ಈ ತಿಂಗಳಲ್ಲಿ ಅಪರೂಪದ ವಿದ್ಯಮಾನವೊಂದು ಜರುಗುತ್ತಿದೆ. ಎಲ್ಲ 9 ಗ್ರಹಗಳು ಕೂಡಾ ಈ ಮಾಸದಲ್ಲಿ ರಾಶಿ ಪರಿವರ್ತನೆ ಮಾಡುತ್ತಿರುವುದು ಬಹಳ ವಿಶೇಷ ಯೋಗವಾಗಿದೆ.
ಈಗಾಗಲೇ, ಕಳೆದ ವಾರವಷ್ಟೇ ಬುಧ ರಾಶಿ ಪರಿವರ್ತನೆಯಾಗಿದೆ. ಏಪ್ರಿಲ್ 12ರಂದು ರಾಹು, ಕೇತು, ಚಂದ್ರ ರಾಶಿ ಪರಿವರ್ತನೆ ನಡೆದಿದೆ. ಏಪ್ರಿಲ್ 13ರಂದು ಬಹಳ ಶುಭ ಗ್ರಹ ಎನಿಸಿರುವ ಗುರು ಗ್ರಹವು ಮೀನ ರಾಶಿಗೆ ಕಾಲಿಡುತ್ತಿದೆ. ಗುರುವಿನ ಈ ನಡೆಯಿಂದ ಯಾವೆಲ್ಲ ರಾಶಿಗಳು ಗುರುಬಲ ಪಡೆಯುತ್ತದೆ, ಯಾವ ರಾಶಿಗಳು ಬಲ ಕಳೆದುಕೊಳ್ಳುತ್ತವೆ, ಎಲ್ಲ ರಾಶಿಗಳ ಫಲ ಏನಿರಲಿದೆ ಎಂಬುದನ್ನು ಪ್ರಾಜ್ಞರಾದ ಡಾ. ಹರೀಶ್ ಕಶ್ಯಪ ವಿವರಿಸಿದ್ದಾರೆ.
ಗುರು ರಾಶಿ ಪರಿವರ್ತನೆ; ತರಲಿದೆ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ
ಗುರುವು ಉಚ್ಛ ಗ್ರಹವಾಗಿದ್ದು, ಕೃಪಾಕಟಾಕ್ಷ ಸಿಕ್ಕರೆ ಬದುಕು ಕನಸಿನಂತೆ ಕಾಣಲಾರಂಭಿಸುತ್ತದೆ. ಗುರುವಿನ ಮಾರ್ಗದರ್ಶನದಿಂದ ಅತ್ಯಂತ ಉನ್ನತಿಯನ್ನು ವ್ಯಕ್ತಿ ಪಡೆಯಬಹುದಾಗಿದೆ. ಗುರು ಗ್ರಹದ ಅನುಗ್ರಹದಿಂದ ವಿವಾಹ, ಸಂಪತ್ತು, ಸಕಲೈಶ್ವರ್ಯಗಳೂ ಒಗ್ಗೂಡಿ ಬರುತ್ತವೆ. ಕಷ್ಟಕಾಲ ಅಂತ್ಯ ಕಾಣುತ್ತದೆ. ಶುಭ ಕಾಲ ಆರಂಭವಾಗುತ್ತದೆ. ಈ ವರ್ಷ ಯಾರಿಗೆಲ್ಲ ಇಂಥ ಶುಭ ಪರ್ವ ಶುರುವಾಗಲಿದೆ ನೋಡೋಣ.