Asianet Suvarna News Asianet Suvarna News

ನಾಗರ ಪಂಚಮಿಯ ದಿನದಂದು 12 ದೇವ ಸರ್ಪಗಳಿಗೆ ಮಾಡಿ ಪೂಜೆ

ನಾಗರ ಪಂಚಮಿಯ ದಿನದಂದು 12 ದೇವ ಸರ್ಪಗಳಿಗೆ ಪೂಜೆ
ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ, ಶಂಖಪಾಲ.. 
ಧೃತರಾಷ್ಟ್ರ, ತಕ್ಷಕ, ಕಾಳಿಂಗ ಮತ್ತು ಪಿಂಗಲ ಸರ್ಪಗಳಿಗೆ ಪೂಜೆ
ಆಗಸ್ಟ್ 2ರ ಮಂಗಳವಾರ ನಾಗರ ಪಂಚಮಿ ಪೂಜೆ

First Published Aug 1, 2022, 1:22 PM IST | Last Updated Aug 1, 2022, 1:22 PM IST

ನಾಡಿಗೆ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ 5ನೇ ದಿನ ಆಚರಿಸಲಾಗುತ್ತದೆ. ಈ ದಿನವನ್ನು ನಾಗ ಚೌತೀ - ಗರುಡ ಪಂಚಮಿ ಎಂದೂ ಕರೆಯಲಾಗುತ್ತದೆ. ಶ್ರಾವಣ ಶುಕ್ಲ ಚೌತಿಯಂದು ನಾಗಾರಾಧನೆ, ಪಂಚಮಿಯು ಗರುಡ ಆರಾಧನೆಯೂ ಇದೆ. ಈ ಬಾರಿ ಆಗಸ್ಟ್ 2ರ ಮಂಗಳವಾರ ನಾಗರ ಪಂಚಮಿ ಪೂಜೆಯಿದ್ದು, ಪಂಚಮಿ ತಿಥಿಯು ಆ.2ರ ಬೆಳಗ್ಗೆ 05:13ಕ್ಕೆ ಆರಂಭವಾಗಿ, ಆ.3ರ ಬೆಳಿಗ್ಗೆ 05:41ಕ್ಕೆ ಅಂತ್ಯವಾಗುತ್ತದೆ. ಆಗಸ್ಟ್ 2ರಂದು ಬೆಳಿಗ್ಗೆ 06:05 ರಿಂದ 08:41ರವರೆಗೆ ಪೂಜಾ ಮುಹೂರ್ತವಿದೆ. 

ನಾಗರ ಪಂಚಮಿಯ ದಿನದಂದು ಅನಂತ, ವಾಸುಕಿ, ಶೇಷ, ಪದ್ಮ, ಕಂಬಲ, ಅಶ್ವತಾರ, ಶಂಖಪಾಲ,  ಧೃತರಾಷ್ಟ್ರ, ತಕ್ಷಕ, ಕಾಳಿಂಗ ಮತ್ತು ಪಿಂಗಲ ಸೇರಿ 12 ದೇವ ಸರ್ಪಗಳಿಗೆ ಪೂಜೆ ಮಾಡಬೇಕು. ನಾಗರನಿಗೆ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರಿನಿಂದ ಅಭಿಷೇಕ ಮಾಡಿ ಬಳಿಕ ಗೆಜ್ಜೆವಸ್ತ್ರ ಅರ್ಪಿಸಬೇಕು. ನಾಗನ ಆರಾಧನೆಯಲ್ಲಿ ಅರಿಶಿನ ಹಾಗೂ ಗಂಧಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಕೆಂಪು ಹೂವನ್ನು ಬಳಸಬೇಕು. 

ನಾಗರಪಂಚಮಿ ಹಬ್ಬ 2022 ಯಾವಾಗ, ಮಹತ್ವವೇನು? ಆಚರಣೆ ಹೇಗೆ?

ನಾಗ ದೋಷವಿದ್ದಾಗ ವಿವಾಹ ವಿಳಂಬ, ಸಂತಾನ ಇಲ್ಲದಿರುವುದು, ವಿದ್ಯಾ ಭಂಗ, ನಿರುದ್ಯೋಗ, ಚರ್ಮದ ತೊಂದರೆ ಹೀಗೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಇವುಗಳ ನಿವಾರಣೆಗಾಗಿ ಏನು ಮಾಡಬೇಕು, ಯಾವ ಶ್ಲೋಕ ಪಠಿಸಬೇಕು, ಹೇಗೆ 12 ಸರ್ಪಗಳ ಪೂಜೆ ಮಾಡಬೇಕು ಎಲ್ಲವನ್ನೂ ಪ್ರಾಜ್ಞ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ. 
 

Video Top Stories