Asianet Suvarna News Asianet Suvarna News

ಗಣೇಶನ ಮಿತ್ರ ಆ.ರಾ. ಮಿತ್ರ ಜೊತೆ ಗಣೇಶೋತ್ಸವ ವಿಶೇಷ ಕಾರ್ಯಕ್ರಮ

ಹಾಸ್ಯ ಮನೋಭಾವ ಇದ್ದರೆ ಏನೂ ಇಲ್ಲದ್ದಲ್ಲೂ ಹಾಸ್ಯವನ್ನು ಸೃಷ್ಟಿಸಬಹುದು ಎನ್ನುತ್ತಾರೆ ವಿದ್ವಾಂಸರಾದ ಅ.ರಾ. ಮಿತ್ರ. ಗಣೇಶೋತ್ಸವ ಪ್ರಯುಕ್ತ ಸುವರ್ಣ ನ್ಯೂಸ್ ಇವರೊಂದಿಗೆ ವಿಶೇಷ ಮಾತುಕತೆ ನಡೆಸಿದೆ..

Sep 1, 2022, 4:35 PM IST

ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಎಂದರೆ ನಿಮಗೆ ತಿಳಿಯದೆ ಹೋಗಬಹುದು. ಅದೇ ಅ.ರಾ. ಮಿತ್ರ ಎಂದರೆ ಬಹುಜನರಿಗೆ ಪರಿಚಯ ಸಿಗುತ್ತದೆ. ನಮ್ಮ ನಾಡಿನ ಶ್ರೇಷ್ಠರ ಸಾಲಿನ ಹಾಸ್ಯತಜ್ಞ, ಉಪನ್ಯಾಸಕ, ವಿದ್ವಾಂಸ, ಅಧ್ಯಾಪಕ, ಬರಹಗಾರ, ವಿಮರ್ಶಕ, ಸಜ್ಜನ ಮನೋಧರ್ಮದ ಬಹುಮುಖಿ ವ್ಯಕ್ತಿತ್ವದ ಅ. ರಾ. ಮಿತ್ರ ಅವರೊಂದಿಗೆ ಸುವರ್ಣ ನ್ಯೂಸ್ ಗಣೇಶನ ವಿಚಾರವಾಗಿ ಮಾತನಾಡಿದೆ. ಹಾಸ್ಯಪ್ರಜ್ಞೆ ಜತೆಗೆ ಪಾಂಡಿತ್ಯವೂ ಬೆರತ ಅಪರೂಪದ ವ್ಯಕ್ತಿಯಾದ ಇವರ ಮಾತುಗಳಲ್ಲಿ ಗಣೇಶನ ಬಗ್ಗೆ ಕೇಳೋಣ ಬನ್ನಿ..

Ganesha Temples: ಕರ್ನಾಟಕದ ಅಷ್ಟ ವಿನಾಯಕ ದರ್ಶನ