ಇಂದು ಗಣೇಶ ಚತುರ್ಥಿ: ಗಣೇಶನ ರೂಪದ ಹಿಂದಿದೆ ಈ ಪೌರಾಣಿಕ ಕಥೆಗಳು

ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಎಲ್ಲೆಡೆ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ಸಡಗರ, ಸಂಭ್ರಮ ಮನೆ ಮಾಡಿದೆ. ಗಣಪತಿಯ ರೂಪ, ಹುಟ್ಟಿನ ಬಗ್ಗೆ ಬೇರೆ ಬೇರೆ ಕಥೆಗಳಿವೆ. 

First Published Sep 10, 2021, 8:56 AM IST | Last Updated Sep 10, 2021, 9:18 AM IST

ಇಂದು ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಎಲ್ಲೆಡೆ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ, ಪೂಜೆ, ಸಡಗರ, ಸಂಭ್ರಮ ಮನೆ ಮಾಡಿದೆ. ಗಣಪತಿಯ ರೂಪ, ಹುಟ್ಟಿನ ಬಗ್ಗೆ ಬೇರೆ ಬೇರೆ ಕಥೆಗಳಿವೆ. ಶಿವ ಒಮ್ಮೆ ಮಂದಹಾಸ ಬೀರಿದನಂತೆ. ಆ ನಗುವಿನಿಂದ ಒಂದು ಪುಟ್ಟ ಕಂದ ಹುಟ್ಟುತ್ತಾನೆ. ಆ ಕಂದನ ಸೌಂದರ್ಯ ನೋಡಿ ಪಾರ್ವತಿ ಕೂಡಾ ಮೈಮರೆಯುತ್ತಾಳೆ. ನನ್ನ ನಗುವಿಗಿಲ್ಲದ ಮಹತ್ವ ನನ್ನ ನಗುವಿನಿಂದ ಹುಟ್ಟಿದ ಮಗುವಿಗೆ ಕೊಟ್ಟಿದ್ದಕ್ಕೆ ಶಿವ ಕೋಪೋದ್ರಿಕ್ತನಾಗುತ್ತಾನೆ. ಕೊನೆಗೆ ಪಾರ್ವತಿ ಶಿವನನ್ನು ಸಮಾಧಾನಿಸುತ್ತಾಳೆ.