Asianet Suvarna News Asianet Suvarna News

ಉಜ್ಜೈನ್ ಮಹಾಕಾಳ ದೇವಸ್ಥಾನದಲ್ಲಿ ನಾಯಿ ಜಗಳದ ವಿಡಿಯೋ ವೈರಲ್

ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳ ಮಂದಿರದ ಮಹಿಮೆ ಒಂದೆರಡಲ್ಲಿ. ಇಲ್ಲಿ ಇತ್ತೀಚೆಗೆ ವಿಚಿತ್ರ ಎನಿಸುವ ದೃಶ್ಯವೊಂದು ಕಂಡು ಬಂದಿದ್ದು, ಗರ್ಭಗುಡಿ ಮುಂದೆ ಒಂದಕ್ಕೊಂದು ಜಗಳವಾಡಿವೆ. ಈ ದೃಶ್ಯ ಕಂಡು ಭಕ್ತರು ಭಯಭೀತರಾಗಿದ್ದರು.

 

First Published Aug 22, 2024, 4:01 PM IST | Last Updated Aug 22, 2024, 4:01 PM IST

ಮಹಾಕಾಳ ದೇವಸ್ಥಾನ ನಾಯಿ ಜಗಳದ ವಿಡಿಯೋ: ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ವಿಶ್ವವಿಖ್ಯಾತ ಮಹಾಕಾಳ ದೇವಸ್ಥಾನವು ತನ್ನ ಅವ್ಯವಸ್ಥೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇತ್ತೀಚಿಗೆ ರಾತ್ರಿ ನಡೆಯುವ ಶಯನಾರತಿ ವೇಳೆ 3 ಬೀದಿ ನಾಯಿಗಳು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ದೇವಸ್ಥಾನದ ಗರ್ಭಗುಡಿ ಮುಂದೆ ಒಂದಕ್ಕೊಂದು ಕಚ್ಚಿಕೊಂಡಿವೆ. ಆ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಶ್ವಾನ ಜಗಳ ನೋಡಿ ಭಕ್ತ ಭಯಗೊಂಡು ಓಡಿ ಹೋಗಿದ್ದಾರೆ. ಬಹಳ ಪ್ರಯತ್ನದ ನಂತರ ಈ ನಾಯಿಗಳನ್ನು ದೇವಸ್ಥಾನದ ಆವರಣದಿಂದ ಹೊರ ಕಳುಹಿಸಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
 

Video Top Stories