
ಯಾವಾಗ ಬರುವುದು ಸಿಂಹಕ್ಕೆ ಧನಯೋಗ?
ಸಿಂಹ ರಾಶಿಗೆ ಧನಾಧಿಪತಿ ಗ್ರಹ ಯಾರು? ಈ ರಾಶಿಯವರು ಹಣವಂತರಾಗಲು ಯಾವ ಗ್ರಹಗ ಅನುಗ್ರಹ ಬೇಕು? ಆ ಗ್ರಹ ಮಾರಕ ಸ್ಥಾನದಲ್ಲಿದ್ದರೆ ಅನುಗ್ರಹ ಪಡೆಯಲು ಏನು ಮಾಡಬೇಕು?
ಹಣವಂತರಾಗುವುದು ಎಲ್ಲರ ಕನಸು. ಶ್ರೀಮಂತಿಕೆಯಿಂದ ಬಯಸಿದ ಸೌಕರ್ಯಗಳನ್ನು ಪಡೆಯಬಹುದು. ಎಲ್ಲರ ಅವಿರತ ಶ್ರಮದ ಹಿಂದೆಯೂ ಹಣ ಮಾಡುವ ಬಯಕೆ ಇರುತ್ತದೆ. ಅಂತೆಯೇ ಇಂದು ಸಿಂಹ ರಾಶಿ(Leo Zodiac sign)ಯವರ ಧನಯೋಗದ ಬಗ್ಗೆ ನೋಡೋಣ. ಸಿಂಹ ರಾಶಿಯು ಏನು ಮಾಡಿದರೆ ಸಿಂಹಕ್ಕೆ ಧನ ಲಾಭ ಸಿದ್ಧಿಯಾಗುತ್ತದೆ?
Vastu Tips: ಲಕ್ಷ್ಮೀ ಕಟಾಕ್ಷಕ್ಕೆ ತುಳಸಿ ಜತೆಗೆ ಕಪ್ಪು ದತ್ತೂರವೂ ಇರಲಿ ಮನೆಯಲ್ಲಿ
ಸಿಂಹ ರಾಶಿಗೆ ಧನಾಧಿಪತಿ ಹಾಗೂ ಲಾಭಾಧಿಪತಿ ಬುಧ ಗ್ರಹ. ಈ ಗ್ರಹವು ಕನ್ಯಾ ರಾಶಿಯಲ್ಲಿದ್ದರೆ ಅಂದರೆ ದ್ವಿತೀಯ ಸ್ಥಾನದಲ್ಲಿದ್ದರೆ ಆಗ ಸಿಂಹಕ್ಕೆ ಸ್ವಯಾರ್ಜಿತ ಆಸ್ತಿ ಗಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಮಾತುಗಾರಿಕೆಯಲ್ಲಿ ಸೈ ಎನಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಯಸಿದ ಮೃಷ್ಟಾನ್ನ ಸಿಗುತ್ತದೆ. ಆದರೆ, ಬುಧ ಗ್ರಹ ಮಾರಕ ಸ್ಥಾನದಲ್ಲಿದ್ದಾಗ ಏನು ಪರಿಹಾರ ಮಾಡಬೇಕು? ಸರಳ ಉಪಾಯವನ್ನು ಹೇಳಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.