
ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
ಡಿಕೆ ಶಿವಕುಮಾರ್ ಅವರು ಕಪಿಲೇಶ್ವರನ ಸನ್ನಿಧಿಯಲ್ಲಿ ಶಿವಲಿಂಗಕ್ಕೆ 101 ಲೀಟರ್ ಹಾಲಿನ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಡಿಕೆ ಅವರ ಈ ಭಕ್ತಿಯ ಹೆಜ್ಜೆಯ ಹಿಂದಿನ ರಾಜಕೀಯ ಯುಕ್ತಿಯನ್ನು ಈ ವರದಿ ವಿಶ್ಲೇಷಿಸುತ್ತದೆ.
ಪರಮೇಶ್ವರನ ಸನ್ನಿಧಿಯಲ್ಲಿ ಪರಮಭಕ್ತ. ಶಿವಲಿಂಗಕ್ಕೆ 101 ಲೀಟರ್ ಹಾಲಿನ ಅಭಿಷೇಕ ಮಾಡಿದ್ರು ಡಿಕೆ? ತಮ್ಮ ಕೈಯಾರೆ ಶಿವಪೂಜೆ ನೆರವೇರಿಸಿದ್ರು ಶಿವಕುಮಾರ್! ಡಿಕೆ ಕೈಯಲ್ಲಿ ರುದ್ರಾಕ್ಷಿ ಮಾಲೆ. ಭಕ್ತನ ಮಹದಾಸೆ ಈಡೇರಿಸ್ತಾನಾ ರುದ್ರದೇವ? ದಕ್ಷಿಣ ಕಾಶಿಯಲ್ಲಿ ನಿಂತು ಡಿಕೆ ಹೇಳಿದ್ದೇನು? ಗೊತ್ತಾ ಬಂಡೆ ಆರಾಧಿಸಿದ ಆ ಶಿವಲಿಂಗದ ಚರಿತ್ರೆ, ಕಪಿಲೇಶ್ವರನ ಇತಿಹಾಸ? ಆ ಇಂಟ್ರೆಸ್ಟಿಂಗ್ ಸ್ಟೋರಿ ನೋಡಿ.
ಡಿಕೆ ಶಿವಕುಮಾರ್ ಅವ್ರ ರಾಜಕೀಯ ಹೆಜ್ಜೆಯ ಮುಂದಿನ ಗುರಿ ಮುಖ್ಯಮಂತ್ರಿ ಸಿಂಹಾಸನ. ಅದನ್ನು ದಕ್ಕಿಸಿಕೊಳ್ಳೋದಕ್ಕೆ ಶಕ್ತಿ, ಯುಕ್ತಿಯ ಜೊತೆ ಭಕ್ತಿಯ ಹೆಜ್ಜೆ ಇಡುತ್ತಿದ್ದಾರೆ ಬಂಡೆ. ಮೊನ್ನೆ ಮೊನ್ನೆಯಷ್ಟೇ ಪ್ರತ್ಯಂಗೀರಾ ದೇವಿ ದರ್ಶನ, ಈಗ ದಕ್ಷಿಣ ಕಾಶಿಯಲ್ಲಿ ಶಿವನ ಆರಾಧನೆ. ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಮರುದಿನವೇ ಡಿಕೆ ಶಿವಕುಮಾರ್ ತ್ಯಾಗದ ಬಗ್ಗೆ ಮಾತಾಡಿದ್ದೇಕೆ? ತಾವು ಈ ಹಿಂದೆ ಮಾಡಿದ ತ್ಯಾಗವನ್ನು ಈಗ ನೆನಪಿಸ್ತಾ ಇರೋದ್ರ ಮರ್ಮ ಏನು? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.
ಡಿಕೆ ಶಿವಕುಮಾರ್ ಕಪಿಲೇಶ್ವರನ ಸನ್ನಿಧಿಯಲ್ಲಿ ಶಿವಲಿಂಗ ಪೂಜೆ ನಡೆಸಿದ್ದೇ ತಡ. ಸಿದ್ದರಾಮಯ್ಯ ಸಂಪುಟದ ಮತ್ತೊಬ್ಬರು ಪ್ರಭಾವಿ ಮಂತ್ರಿ ಶಿವನಿಗೆ ನಮೋ ಎಂದಿದ್ದಾರೆ. ಡಿಕೆ ಸ್ಟೈಲ್'ನಲ್ಲೇ ಶಿವಲಿಂಗ ಪೂಜೆ ಮಾಡಿ ಹೋಗಿದ್ದಾರೆ. ಆ ಮಂತ್ರಿ ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.