ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ವಿಜಯಪುರ ಜನ! ಬಿಂದಿಗೆ ನುಡಿದ ಭವಿಷ್ಯ ನಿಜವಾಗುತ್ತಾ?
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮುಂದಿನ ಮಳೆಯ ಬಗ್ಗೆ ತಿಳಿದುಕೊಳ್ಳಲು ಗ್ರಾಮಸ್ಥರು ವಿಶೇಷ ಪೂಜೆಯೊಂದನ್ನ ನಡೆಸಿದ್ದಾರೆ. ತಾಮ್ರದ ಕೊಡದ ಪೂಜೆ ಮಾಡುವ ಮೂಲಕ ಮಳೆಯ ಭವಿಷ್ಯ ಆಲಿಸಿದ್ದಾರೆ.
ವಿಜಯಪುರ (ಜು.4): ಸಾಮಾನ್ಯವಾಗಿ ಮಳೆಗಾಗಿ ಬೊಂಬೆ ಮದುವೆ. ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮಾಡುವುದನ್ನಾ ಎಲ್ಲೆಡೆ ನೋಡಿದ್ದೇವೆ. ಜೊತೆಗೆ ಗುರ್ಜಿ ಪೂಜೆಯನ್ನೂ ಮಾಡುವುದು ವಾಡಿಕೆ. ಇವುಗಳ ಹೊರತಾಗಿ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮುಂದಿನ ಮಳೆಯ ಬಗ್ಗೆ ತಿಳಿದುಕೊಳ್ಳಲು ಗ್ರಾಮಸ್ಥರು ವಿಶೇಷ ಪೂಜೆಯೊಂದನ್ನ ನಡೆಸಿದ್ದಾರೆ. ತಾಮ್ರದ ಕೊಡದ ಪೂಜೆ ಮಾಡುವ ಮೂಲಕ ಮಳೆಯ ಭವಿಷ್ಯ ಆಲಿಸಿದ್ದಾರೆ. ಹಲವಾರು ವರ್ಷಗಳಿಂದ ಉಕ್ಕಲಿ ಗ್ರಾಮದ ಗುರು ಹಿರಿಯರು ಹಾಗೂ ಸರ್ವ ಧರ್ಮೀಯರು ಸೇರಿಕೊಂಡು ಮಳೆಗಾಗಿ ತಾಮ್ರದ ಕೊಡದ ಪೂಜೆ ಮಾಡುತ್ತಾರೆ.