Lunar Eclipse: ಯಾವ ರಾಶಿಗೆ ಗ್ರಹಣ ಬಾಧೆ ಹೆಚ್ಚು? ಕೈಗೊಳ್ಳಬೇಕಾದ ಪರಿಹಾರವೇನು?
ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ
ಮೇಷ, ಕರ್ಕ, ತುಲಾ, ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚು
ಯಾವ ರಾಶಿಗಳಿಗೆ ಗ್ರಹಣ ದೋಷ ಕಡಿಮೆ?
ಗ್ರಹಣ ದೋಷ ಇರುವವರು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳೇನು?
ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇದರ ಪರಿಣಾಮ ಎಲ್ಲ ರಾಶಿಗಳ ಮೇಲೂ ಇರಲಿದೆ. ಹಾಗಿದ್ದೂ, ಕೆಲ ರಾಶಿಗಳು ಚಂದ್ರಗ್ರಹಣದ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮತ್ತೆ ಕೆಲ ರಾಶಿಗಳಿಗೆ ಗ್ರಹಣ ದೋಷ ಕಡಿಮೆ ಇರುತ್ತದೆ. ಈ ಚಂದ್ರಗ್ರಹಣದ ಪರಿಣಾಮ ಯಾವ ರಾಶಿಗಳ ಮೇಲೆ ಹೇಗಿರಲಿದೆ? ಗ್ರಹಣ ದೋಷ ಇರುವವರು ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳೇನು? ಮುಂದಿನ ಕೆಲ ದಿನ ವರ್ತನೆ ಹೇಗಿರಬೇಕು, ಯಾವೆಲ್ಲ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.