
Dakshina Kannada: ನಾಗ ಒಲಿದರೆ ಆರೋಗ್ಯ, ಸಮೃದ್ಧಿ, ಅಪಚಾರ ಎಸಗಿದರೆ ಶಿಕ್ಷೆ ತಪ್ಪಿದ್ದಲ್ಲ
ನಾಗ (Nagaradhane) ಒಲಿದರೆ ನಮಗೆ ಮೊಗೆ ಮೊಗೆದು ಕೊಡುತ್ತಾನೆ, ಮುನಿದರೆ ಮಾತ್ರ ತೊಂದರೆ ತಪ್ಪಿದ್ದಲ್ಲ. ನಾಗಾರಾಧನೆಯಿಂದ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದು ನಿಜವೂ ಆಗಿದೆ.
ದಕ್ಷಿಣ ಕನ್ನಡ (ಡಿ. 10): ನಾಗ (Nagaradhane) ಒಲಿದರೆ ನಮಗೆ ಮೊಗೆ ಮೊಗೆದು ಕೊಡುತ್ತಾನೆ, ಮುನಿದರೆ ಮಾತ್ರ ತೊಂದರೆ ತಪ್ಪಿದ್ದಲ್ಲ. ನಾಗಾರಾಧನೆಯಿಂದ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದು ನಿಜವೂ ಆಗಿದೆ.
ಇಲ್ಲಿನ ಕೋಡಿಕಲ್ 9ನೇ ಕ್ರಾಸ್‌ನಲ್ಲಿರುವ ನಾಗಬನದಲ್ಲಿದ್ದ 13 ನಾಗನ ಕಲ್ಲುಗಳ ಪೈಕಿ ಒಂದು ಕಲ್ಲನ್ನು ದುಷ್ಕರ್ಮಿಗಳು ಕಿತ್ತೆಸೆದು ಹಾನಿ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಸಂಬಂಧ ಕಾವೂರಿನ ಸಫ್ವಾನ್, ಪ್ರವೀಣ್ ಅನಿಲ್ ಮೊಂತೇರೊ, ಸೊಹೈಲ್, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಷಾದ್ ಬಂಧಿಸಲಾಗಿದೆ. ವಿಶೇಷವೆಂದರೆ ನಾಗನ ಕಲ್ಲು ಕಿತ್ತವರಿಗೆ ಕೈ ನಡುಕ, ಆಟೋ ರಿಕ್ಷಾ ಅಪಘಾತ, ಕನಸಲ್ಲಿ ನಾಗದರ್ಶನ ಸೇರಿ ಹಲವು ಸಂಕಷ್ಟಎದುರಾಗಿದೆ. ಈ ವಿಚಾರವನ್ನು ಪೊಲೀಸ್ ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟಿರುವುದಾಗಿ ಶಾಸಕ ಡಾ.ಭರತ್ ಶೆಟ್ಟಿಮಾಧ್ಯಮಗಳಿಗೆ ತಿಳಿಸಿದ್ದಾರೆ.
Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರ ಶಿಕ್ಷೆ
ನಾಗಾರಾಧನೆ ವ್ಯಾಪಕವಾಗಿರುವ ಕರಾವಳಿ ಜಿಲ್ಲೆಗಳಲ್ಲಿ ನಾಗ ಬನದ ಅಪವಿತ್ರಗೊಳಿಸುವ ಕೆಲಸವನ್ನು ಯಾವ ಧರ್ಮದವರೂ ಮಾಡಲು ಹೋಗುವುದಿಲ್ಲ. ಆರೋಪಿಗಳ ಪೈಕಿ ಒಬ್ಬನಿಗೆ ನಾಗನ ಕಲ್ಲು ಎತ್ತಿದಾಗಲೇ ಕೈ ಕಾಲು ನಡುಗಿ ಅಲ್ಲಿಂದ ಓಡಿದ್ದಾನೆ. ಮತ್ತೊಬ್ಬ ಆರೋಪಿ ರಿಕ್ಷಾ ಚಾಲಕನಾಗಿದ್ದು, ಘಟನೆ ಬಳಿಕ ರಿಕ್ಷಾ ಪಲ್ಟಿಯಾಗಿ ಗಾಯವಾಗಿದೆ. ಇನ್ನೊಬ್ಬನಿಗೆ ಮಾನಸಿಕವಾಗಿ ರಾತ್ರಿ ಕನಸುಗಳಲ್ಲಿ ನಾಗನನ್ನು ಕಂಡು ಮಾನಸಿಕ ಅಸಮತೋಲನವಾಗಿದೆ. ಈ ವಿಚಾರಗಳನ್ನು ಆರೋಪಿಗಳು ಹೇಳಿದ್ದಾಗಿ ತನಿಖಾಧಿಕಾರಿಗಳು ನನ್ನಲ್ಲಿ ತಿಳಿಸಿದ್ದರು ಎಂದು ಶಾಸಕ ಡಾ.ಭರತ್ ಶೆಟ್ಟಿಹೇಳಿದ್ದಾರೆ.