ನಾಳೆ ಆಷಾಢ ಶುಕ್ರವಾರ, ಪೂಜೆಗೆ 25 ಸಾವಿರ ಮ್ಯಾಂಗೋ ಬರ್ಫಿ ಪ್ರಸಾದ...

ಆಷಾಢ ಮಾಸದ  ಮೊದಲ ಶುಕ್ರವಾರದ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿದ್ದತಾ ಕೆಲಸ ಭರದಿಂದ ಸಾಗಿದೆ.

First Published Jun 22, 2023, 5:25 PM IST | Last Updated Jun 22, 2023, 5:25 PM IST

ಆಷಾಢ ಮಾಸದ  ಮೊದಲ ಶುಕ್ರವಾರದ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿದ್ದತಾ ಕೆಲಸ ಭರದಿಂದ ಸಾಗಿದೆ.  ಆಷಾಢದಲ್ಲಿ ಮೈಸೂರಿನ ಅಧಿದೇವತೆ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.ಬರುವ ಭಕ್ತರಿಗೆ ಪ್ರಸಾದ ವಿತರಿಸಲು ಚಾಮುಂಡೇಶ್ವರಿ ಪೂಜಾ ಸಮಿತಿಯವರು ಸಿದ್ದತೆ ನಡೆಸಿದ್ದಾರೆ. ಇದಕ್ಕಾಗಿ 25 ಸಾವಿರ ಮ್ಯಾಂಗೋ‌ ಬರ್ಫಿ ಸಿದ್ದಗೊಳಿಸಲಾಗುತ್ತಿದೆ.ಮ್ಯಾಂಗೋ ಬರ್ಫಿ ತಯಾರಿಕೆಗಾಗಿ 30 ಕೆಜಿ ಮೈದಾ, 200 ಕೆಜಿ ಆಲ್ಕೋವಾ, ಸಕ್ಕರೆ 400 ಕೆಜಿ, ಮಾವಿನಹಣ್ಣಿನ ಫಲ್ಪ್ 100 ಲೀಟರ್, ಬಾದಾಮಿ 5 ಕೆಜಿ, ನಂದಿನಿ ತುಪ್ಪ 2 ಟಿನ್ ಹಾಗೂ ಮಿಲ್ಕ್ ಪೌಡರ್ 30 ಕೆಜಿ ಬಳಕೆ ಮಾಡಲಾಗುತ್ತಿದೆ. ಆಷಾಢ ಶುಕ್ರವಾದ ಬೆಳಗ್ಗೆಯಿಂದ ಪ್ರಸಾದ ವಿತರಣೆ ಮಾಡಲಾಗುತ್ತದೆ.