
ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
ದಕ್ಷಿಣ ಅಯ್ಯೋಧ್ಯೆಯಾಗಲಿದೆ ಬೆಂಗಳೂರಿನ ಈ ಪುಣ್ಯ ಸ್ಥಳ. ಬೃಹತ್ ರೂಪದಲ್ಲಿ ಕಂಗೊಳಿಸುತ್ತಿದ್ದಾನೆ ಆಂಜನೇಯ. ಏಷ್ಯಾದ ಅತೀ ಎತ್ತರದ ಏಕಾಶಿಲಾ ಮೂರ್ತಿಯಾಗಲಿದೆ ರಾಜ್ಯಧಾನಿಯ ಹೆಮ್ಮೆ.
ದಕ್ಷಿಣ ಅಯ್ಯೋಧ್ಯೆಯಾಗಲಿದೆ ಬೆಂಗಳೂರಿನ ಈ ಪುಣ್ಯ ಸ್ಥಳ. ಬೃಹತ್ ರೂಪದಲ್ಲಿ ಕಂಗೊಳಿಸುತ್ತಿದ್ದಾನೆ ಆಂಜನೇಯ. ಏಷ್ಯಾದ ಅತೀ ಎತ್ತರದ ಏಕಾಶಿಲಾ ಮೂರ್ತಿಯಾಗಲಿದೆ ರಾಜ್ಯಧಾನಿಯ ಹೆಮ್ಮೆ. ಪುಣ್ಯಭೂಮಿ ಅಯ್ಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ಶ್ರೀರಾಮನ ಬಂಟ ಹನುಮಂತನ ಬೃಹದ್ರೂಪಿ ಏಕಾಶಿಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾಲ ಸನಿಹಿತವಾಗಿದೆ. ಬೆಂಗಳೂರಿನ ಎಚ್ಬಿಆರ್ ಲೇಔಟ್, ಕಾಚರಕನಹಳ್ಳಿ, ಕೋಂದಡರಾಮ ದೇವಸ್ಥಾನದಲ್ಲಿ ಏಷ್ಯಾದ ಅತೀ ಎತ್ತರದ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ರಾಮ-ಲಕ್ಷ್ಮಣರ ಸಮೇತ ತಲೆ ಎತ್ತಿ ನಿಂತಿರೋ 72 ಅಡಿ ಎತ್ತರದ ಪವನಸುತನ ಬಗೆಗಿನ ವಿಶೇಷ ವರದಿ ಇಲ್ಲಿದೆ. ಅಂಜನಾದೇವಿಯ ಪುತ್ರ ಆಂಜನೇಯ.. ರಾಮನ ಬಂಟ ಹನುಮಂತ... ಸೀತಾನ್ವೇಷಣೆಯಲ್ಲಿ ಆಂಜನೇಯನ ಸಾಹಸ ಅಪಾರ..
ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ.. ಇಂಥಹ ಅಜಾನುಬಾಹು ಆಂಜನೇಯನ ಬೃಹದ್ ಮೂರ್ತಿ ಈಗ ಕರ್ನಾಟಕದಲ್ಲಿ ತಲೆ ಎತ್ತಿದೆ. ಈ ಬೃಹದಾಕಾರ ಹನುಮಾನ್ ಏಕಶಿಲಾ ವಿಗ್ರಹ ತಲೆ ಎತ್ತಿರೋದು ರಾಜ್ಯ ರಾಜಧಾನಿ ಬೆಂಗಳೂರಲ್ಲೇ.. ಯೆಸ್.. ಕೆ.ಆರ್.ಪುರಂನ ಕಾಚರಕನಹಳ್ಳಿಯ ಶ್ರೀ ಕೊದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್ ಹನುಮ ಭಕ್ತನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಈ ವಿಗ್ರಹದ ತೂಕ ಬರೋಬ್ಬರಿ 480 ಟನ್. 72 ಅಡಿ ಎತ್ತರ, 480ಟನ್ ತೂಕ ಹೊಂದಿರೋ ವಿಗ್ರಹ ಇದು.. ಇಷ್ಟು ದೊಡ್ಡ ವಿಗ್ರಹ ನಿರ್ಮಾಣ ಅಷ್ಟು ಸುಲಭದ ಕೆಲಸ ಅಲ್ವೇ ಅಲ್ಲ.. ಹೌದು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳ ಮೂಲಕ ಈ ಬೃಹತ್ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯ್ತು.
ವಿಶ್ವಕ್ಕೇನ ಗಣಪತಿ ಪೂಜೆ, ರಾಮತಾರಕ ಹೋಮ, ಪವಮಾನ ಹೋಮದ ನಂತರ ವಿಗ್ರಹ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಪ್ರತಿಷ್ಠಾಪನೆ ಕಾರ್ಯವನ್ನು ಕಣ್ತುಂಬಿಕೊಂಡರು. ಈ ಬೃಹತ್ ವಿಗ್ರಹ ಪ್ರತಿಷ್ಠಾಪನೆ ಹಿಂದೆ ದೊಡ್ಡ ಸಾಹಸಗಾತೆಯೇ ಇದೆ.. ಸುಮಾರು 1000ಟನ್ ತೂಕದ ಬೃಹತ್ ಬಂಡೆಯನ್ನು ಕೋಲಾರದ ನರಸಾಪುರದಿಂದ ಬೆಂಗಳೂರಿಗೆ ಆರು ವರ್ಷಗಳ ಹಿಂದೆ ಸಾಗಿಸಲಾಗಿತ್ತು. ಈ ಸಾಹಸಮಯ ದೃಶ್ಯಗಳನ್ನು ನೀವು ಕೂಡ ನೋಡೆ ಇರ್ತಿರಾ.. ಸುಮಾರು 30km ದೂರದಿಂದ ಅಡೆತಡೆಗಳನ್ನೆಲ್ಲಾ ಮೆಟ್ಟಿನಿಂತು 1000 ಟನ್ ಗಾತ್ರದ ಬಂಡೆಯನ್ನು ಬೆಂಗಳೂರಿಗೆ ತರಲಾಯ್ತು.
ಹೀಗೆ ತಂದ ಬೃಹತ್ ಬಂಡೆ ಕೆತ್ತನೆಗೆ 2018ರಲ್ಲಿ ಚಾಲನೆ ನೀಡಲಾಗಿತ್ತು. 2018ರಿಂದ 6 ವರ್ಷಗಳ ನಿರಂತರ ಕೆತ್ತನೆ ಕಾರ್ಯದ ಬಳಿಕ ಬೃಹತ್ ವಿಗ್ರಹ ರೂಪ ಪಡೆದಿದೆ. ಇದೀಗ, ಶ್ರೀರಾಮಲಕ್ಷ್ಮಣರ ಸಮೇತ ವಿಗ್ರಹ ರೂಪದಲ್ಲಿ ಹನುಮಂತ ಬ್ರಹ್ಮಾಂಡವಾಗಿ ಕಂಗೊಳಿಸುತ್ತಿದ್ದಾನೆ. ರಾಮನ ಭಕ್ತರ ಕನಸಿನ ಬೃಹತ್ ಹನುಮ ವಿಗ್ರಹದ ಹಿಂದಿನ ರೂವಾರಿ ಶ್ರೀರಾಮ ಚೈತನ್ಯ ವರ್ಧನಿ ಸಭಾ ಟ್ರಸ್ಟ್ ಮತ್ತು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್.. ಇವರ ನೇತೃತ್ವದಲ್ಲಿ ರಾಮನ ಬಂಟನ ಬೃಹದಾಕಾರದ ಮೂರ್ತಿ ತಲೆಎತ್ತಿದೆ.
ಸುಮಾರು ಹತ್ತು ವರ್ಷಗಳ ಕನಸಿನ ಯೋಜನೆ ಇದಾಗಿದ್ದು, ಈ ಬೃಹದ್ರೂಪಿ ಆಂಜನೇಯ ವಿಗ್ರಹದ ಹಿಂದೆ ನೂರಾರು ಮಂದಿ ಶ್ರಮವಿದೆ.. ಮುಂದಿನ ವರ್ಷ ಹನುಮ ಜಯಂತಿ ದಿನದಂದು ಪ್ರಾಣ ಪ್ರತಿಷ್ಠಾಪನೆ ಮಾಡುವ ಗುರಿಯನ್ನು ಹೊಂದಿರೋದಾಗಿ ಟ್ರಸ್ಟ್ ಅಧ್ಯಕ್ಷ ಎಂ.ಎನ್.ರೆಡ್ಡಿ ಹೇಳಿದ್ರು. ಬಂಡೆ ಆಕಾರದಲ್ಲಿದ್ದ ಶಿಲೆಯನ್ನು ವಿಗ್ರಹ ರೂಪಕ್ಕೆ ತರಲು ಶಿಲ್ಪಿ ರಾಮಕೃಷ್ಣ ಅವರ ಟೀಮ್ ನಾಲ್ಕು ವರ್ಷಗಳಿಂದ ಹಗಲಿರುಳು ಶ್ರಮಿಸಿದೆ. ನಿರಂತರ ಪರಿಶ್ರಮದಿಂದ ಭುಜದ ಮೇಲೆ ರಾಮ-ಲಕ್ಷ್ಮಣರನ್ನು ಹೊತ್ತ ಅಂಜನೇಯ ವಿಗ್ರಹ ಮನೋಜ್ಞವಾಗಿ ಮೂಡಿ ಬಂದಿದೆ. ಈ ವಿಗ್ರಹ ಕೆತ್ತನೆ ಕಾರ್ಯ ನಮಗೆ ಲಭಿಸಿದ್ದು ನಮ್ಮ ಪುಣ್ಯ ಎನ್ನುತ್ತಿದ್ದಾರೆ ಶಿಲ್ಪಿ ರಾಮಕೃಷ್ಣ.