Asianet Suvarna News Asianet Suvarna News

ಸ್ನೇಹದ ಮಹತ್ವವನ್ನು ಭಾಗವತದ ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ

ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ. 

First Published Dec 14, 2020, 6:20 PM IST | Last Updated Dec 14, 2020, 6:20 PM IST

ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ.

ಹೀಗೆ ಕಾಲ ಸರಿಯುತ್ತಾ ಹೋಗುತ್ತದೆ. ಪುರಂಜನನ ಕಾಲ ಮುಕ್ತಾಯವಾಗುತ್ತದೆ. ಮುಂದಿನ ಜನ್ಮದಲ್ಲಿ ಆತ ವೈಧರ್ವಿ ಎನ್ನುವ ಕ್ಷತ್ರಿಯನಾಗಿ ಹುಟ್ಟುತ್ತಾನೆ. ಆಗ ಬ್ರಾಹ್ಮಣನೊಬ್ಬ ವೈಧರ್ವಿಗೆ ಹಿಂದಿನ ಜನ್ಮದ ಸ್ನೇಹದ ಬಗ್ಗೆ ನೆನಪಿಸುತ್ತಾನೆ. ನೀನು ಸ್ನೇಹವನ್ನು ಮರೆತಿದ್ದಕ್ಕೆ ನಿನಗೆ ಈ ಗತಿ ಬಂದಿದೆ ಎಂದು ನೆನಪಿಸುತ್ತಾನೆ. ಆಗ ವೈಧರ್ವಿ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ' ಎನ್ನುತ್ತಾಳೆ. ಇದನ್ನು ನಾರದರು ಈ ರೀತಿ ಹೇಳುತ್ತಾರೆ. 

Video Top Stories