ಅಪ್ಪು ಕಂಡ ಕನಸು ನನಸು: ನಾಳೆ ಯುವ ಮೊದಲ ಸಿನಿಮಾ ಟೈಟಲ್ ಟೀಸರ್ ಅನೌನ್ಸ್
ಯುವ ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿ ಆಗಿದ್ದು,ಮಾರ್ಚ್ 3ನೇ ತಾರೀಖು ಯುವನ ಮೊದಲ ಸಿನಿಮಾದ ಟೈಟಲ್ ಟೀಸರ್ ಅನೌನ್ಸ್ ಆಗ್ತಿದೆ
ಅಪ್ಪು ಕಂಡ ಕನಸು ಈಗ ನನಸಾಗುವ ಟೈಮ್ ಕೂಡಿ ಬಂದಿದೆ. ಇಷ್ಟು ದಿನ ಯುವ ರಾಜ್ ಕುಮಾರ್ ಪಟ್ಟಾಭಿಷೇಕ ಯಾವಾಗ ಅಂತ ಕಾಯುತ್ತಿದ್ದ ದೊಡ್ಮನೆ ಅಭಿಮಾನಿಗಳು ಸಂಭ್ರಮಿಸೋ ದಿನ ಬಂದಿದೆ. ಯುವ ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿ ಆಗಿದೆ. ಪುನೀತ್ ರಾಜಕುಮಾರ್ ಗಾಗಿ ರೆಡಿಯಾಗಿದ್ದ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಹೀರೋ ಆಗಿ ಬಿಗ್ಸ್ಕ್ರೀನ್ಗೆ ಲಾಂಚ್ ಆಗ್ತಿದ್ದಾರೆ. ಅಪ್ಪುಗೆ ಡೈರೆಕ್ಷನ್ ಮಾಡಬೇಕಾಗಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ಯುವನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಮಾರ್ಚ್ 03ಕ್ಕೆ ರಿವೀಲ್ ಆಗಲಿದೆ.ಯುವನ ಬೆಳ್ಳಿತೆರೆ ಫಸ್ಟ್ ಎಂಟ್ರಿ ಸಿನಿಮಾವನ್ನ ಕಟ್ಟಿಕೊಡುವ ಜವಾಬ್ದಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಹಿಸಿಕೊಂಡಿದ್ದಾರೆ. ಅದಕ್ಕಾಗಿ ಪ್ಯಾಮಿಲಿ ಎಮೋಷನಲ್ ಆಕ್ಷನ್ ಸ್ಟೋರಿ ಹೇಣೆದಿದ್ದಾರಂತೆ ಸಂತೋಷ್ ಆನಂದ್ ರಾಮ್. ಈಗಾಗ್ಲೆ ಟೈಟಲ್ ಅನೌನ್ಸ್ ಮಾಡೋಕೆ ಒಂದು ಟೀಸರ್ ಸಿದ್ಧಪಡಿಸಿರೋ ಸಂತೋಷ್ ಆನಂದ್ ರಾಮ್ ಯುವ ರಾಜ್ ಕುಮಾರ್ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಮಾರ್ಚ್ 3ನೇ ತಾರೀಖು ಯುವನ ಮೊದಲ ಸಿನಿಮಾದ ಪೂಜೆ ಹಾಗು ಟೈಟಲ್ ಟೀಸರ್ ಅನೌನ್ಸ್ ಆಗ್ತಿದೆ.