'ಮನೆಯ ಇನ್ನೊಬ್ಬ ಅಣ್ಣನನ್ನು ಕಳೆದುಕೊಂಡಂತಾಗಿದೆ, ಬಾಲು ಸರ್ ಇಷ್ಟು ಬೇಗ ಸಾಯಬಾರದಿತ್ತು'
ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಕನ್ನಡಕ್ಕೂ ಎಸ್‌ಪಿಬಿಗೂ ಅವಿನಾಭಾವ ಸಂಬಂಧ ಇದೆ. ನಟಿ ಸುಧಾರಾಣಿ ಎಸ್‌ಪಿಬಿಯವರನ್ನು ಸ್ಮರಿಸಿಕೊಂಡಿದ್ದಾರೆ.
ಬೆಂಗಳೂರು (ಸೆ. 25): ಗಾನ ಗಾರುಡಿಗ, ಸ್ವರ ಮಾಂತ್ರಿಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಇಂದು ವಿಧಿವಶರಾಗಿದ್ದಾರೆ. ಕನ್ನಡಕ್ಕೂ ಎಸ್‌ಪಿಬಿಗೂ ಅವಿನಾಭಾವ ಸಂಬಂಧ ಇದೆ. ನಟಿ ಸುಧಾರಾಣಿ ಎಸ್‌ಪಿಬಿಯವರನ್ನು ಸ್ಮರಿಸಿಕೊಂಡಿದ್ದಾರೆ.
ಎಸ್‌ಪಿಬಿ ಪ್ರೀತಿಯ ಶಿಷ್ಯಂದಿರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಭಾವುಕರಾಗಿದ್ದು ಹೀಗೆ
'ನನ್ನ ಕುಟುಂಬದ ಜೊತೆ ಬಹಳ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು. ಕಳೆದ ಮಾರ್ಚ್‌ನಲ್ಲಿ ಚೌಡಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಭೇಟಿ ಮಾಡಿದ್ದೇ ಕೊನೆ. ಇಷ್ಟು ಬೇಗ ಹೋಗಬಾರದಿತ್ತು. ಈ ದುಃಖವನ್ನು ನಿಜವಾಗಿಯೂ ಸಹಿಸಲಾಗುತ್ತಿಲ್ಲ' ಎಂದು ಸುಧಾರಾಣಿ ಭಾವುಕರಾದರು.