Asianet Suvarna News Asianet Suvarna News

ರಘು ದೀಕ್ಷಿತ್ ವಿರುದ್ಧ ಪ್ರಶಾಂತ್ ಆರೋಪ; ಸತ್ಯ ಹೊರಬರುವವರೆಗೆ ಕಾಯಲೇಬೇಕು ಎಂದ ಶಿವಣ್ಣ

Aug 30, 2020, 12:19 PM IST

ಬೆಂಗಳೂರು (ಆ. 30): ಡ್ರಗ್ಸ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್ ಸಿಲುಕಿಕೊಂಡಿದೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಚಿತ್ರೋದ್ಯಮಿ ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಇವರ ಹೇಳಿಕೆ ಸಂಚಲನ ಮೂಡಿಸಿದೆ. ಈ ಹೇಳಿಕೆ ಬಗ್ಗೆ ನಟ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. 

' ಡ್ರಗ್ಸ್ ಒಂದು ಚೈನ್ ಲಿಂಕ್. ಇದನ್ನು ಬ್ರೇಕ್ ಮಾಡಬೇಕಿದೆ. ಇದರ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ. ತನಿಖೆಯ ನಂತರ ಸತ್ಯ ಹೊರಬರುತ್ತದೆ. ಆಗ ವಿಚಾರ ಗೊತ್ತಾಗುತ್ತದೆ. ಅಲ್ಲಿಯವರೆಗೆ ನಾವೇನು ಹೇಳೋಕೆ ಆಗುವುದಿಲ್ಲ' ಎಂದು ಶಿವಣ್ಣ ಹೇಳಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ ಇಂದ್ರಜಿತ್ ಬಿಚ್ಚಿಟ್ಟ ರಹಸ್ಯ..!