ಹರಿಹರ ವೀರಮಲ್ಲು ಧರ್ಮಯುದ್ಧ.. ಕಟ್ಟರ್ ಹಿಂದೂ ಲೀಡರ್ ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್..!

ಸದ್ಯ ರಿಲೀಸ್ ಆಗಿರೋ ಟ್ರೈಲರ್‌ ಹರಿಹರ ವೀರಮಲ್ಲು ಮೊಘಲರ ಕಾಲದ ಹಿಂದೂ ವೀರನೊಬ್ಬನ ಐತಿಹಾಸಿಕ ಕಹಾನಿ. ಕೊಹಿನೂರ್ ವಜ್ರದ ಕುರಿತ ಕಥೆ ಕೂಡ ಇದ್ರಲ್ಲಿ ಬರುತ್ತೆ. ಈ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತಂದಿರೋ ಸಿನಿಮಾ…

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ನಟನೆಯ ಹರಿಹರ ವೀರಮಲ್ಲು ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಸದ್ಯ ಈ ಹಿಸ್ಟಾರಿಕಲ್ ಌಕ್ಷನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡ್ತಾ ಇದೆ. ಪವನ್ ಕಲ್ಯಾಣ್ ಈಗ ನಟನಷ್ಟೇ ಅಲ್ಲ ಆಂಧ್ರ ಡಿಸಿಎಂ ಕೂಡ ಹೌದು. ಸೋ ಹರಿಹರ ವೀರಮಲ್ಲುನ ಧರ್ಮಯುದ್ಧ ಅವರ ಪಾಲಿಟಿಕ್ಸ್​​ಗೆ ಬೂಸ್ಟ್ ಕೊಡುವಂತೆ ಇದೆ.

ಹರಿಹರ ವೀರಮಲ್ಲು (Harihara Veeramallu) .. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಅಸಲಿಗೆ ಈ ಸಿನಿಮಾ ಸೆಟ್ಟೇರಿದ್ದು 2020ರಲ್ಲಿ. ಆದ್ರೆ ಪವನ್ ರಾಜಕೀಯ ಒತ್ತಡಗಳ ನಡುವೆ ಈ ಸಿನಿಮಾ ಕಂಪ್ಲೀಟ್ ಆಗ್ಲಿಕ್ಕೆ ಬರೊಬ್ಬರಿ 5 ವರ್ಷ ತೆಗೆದುಕೊಂಡಿದೆ. ಆದ್ರೆ ಇಷ್ಟು ಸಮಯವಾದ್ರೂ ನಿರ್ದೇಶಕ ಕ್ರಿಶ್ ಅಂದುಕೊಂಡಂತೆಯೇ ಸಿನಿಮಾವನ್ನ ರೆಡಿಮಾಡಿದ್ದಾರೆ.

ಸದ್ಯ ರಿಲೀಸ್ ಆಗಿರೋ ಟ್ರೈಲರ್‌ ಹರಿಹರ ವೀರಮಲ್ಲು ಮೊಘಲರ ಕಾಲದ ಹಿಂದೂ ವೀರನೊಬ್ಬನ ಐತಿಹಾಸಿಕ ಕಹಾನಿ. ಕೊಹಿನೂರ್ ವಜ್ರದ ಕುರಿತ ಕಥೆ ಕೂಡ ಇದ್ರಲ್ಲಿ ಬರುತ್ತೆ. ಈ ಐತಿಹಾಸಿಕ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತಂದಿರೋ ಸಿನಿಮಾ ಪ್ರೇಕ್ಷಕರ ಎದುರು 500 ವರ್ಷಗಳ ಹಿಂದಿನ ಕಾಲಮಾನವನ್ನ ಕಟ್ಟಿಕೊಡಲಿದೆ. ಬರೊಬ್ಬರಿ 250 ಕೋಟಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ದವಾಗಿದ್ದು, ಟ್ರೈಲರ್​ನಲ್ಲಿ ಅದ್ದೂರಿತನ ಎದ್ದು ಕಾಣ್ತಾ ಇದೆ.

ಯೆಸ್ ಹರಿಹರ ವೀರಮಲ್ಲುನಲ್ಲಿ ಮುಸ್ಲಿಂ ಚಕ್ರವರ್ತಿ ಔರಂಗಜೇಬನೊಡನೆ ಸೆಣೆಸುವ ಕಥೆ ಇದೆ. ಇತ್ತೀಚಿಗೆ ಹಿಂದಿಯಲ್ಲಿ ಔರಂಗಜೇಬನ ವಿರುದ್ದ ಸೆಳೆಸಿದ ಸಂಭಾಜಿ ಮಹಾರಾಜರ ಕಥೆ ಛಾವಾ ತೆರೆಗೆ ಬಂದಿತ್ತು. ವಿಕ್ಕಿ ಕೌಶಾಲ್ ನಟಿಸಿದ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ಇದೀಗ ವೀರಮಲ್ಲು ಬಗ್ಗೆಯೂ ಅಂಥದ್ದೇ ನಿರೀಕ್ಷೆ ಇದೆ. ಔರಂಗಜೇಬನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ ಇದ್ದಾರೆ. ಪವನ್ ಕಲ್ಯಾಣ್ ವೀರಮಲ್ಲು ಆಗಿ ವೀರತನ ತೋರ್ತಾ ಇದ್ದಾರೆ.

ಅಸಲಿಗೆ ಪವನ್ ಕಲ್ಯಾಣ್ ಈಗ ಬರೀ ನಾಯಕನಟ ಅಲ್ಲ. ಆಂಧ್ರದ ಡಿಸಿಎಂ ಕೂಡ. ಟಿಡಿಪಿ ಪಕ್ಷದ ಜೊತೆ ಪವನ್​ರ ಜನಸೇನಾ ಪಾರ್ಟಿ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಿದ್ದು ಪವನ್ ಕಲ್ಯಾಣ್ ಆಂಧ್ರದ ಡಿಸಿಎಂ ಆಗಿದ್ದಾರೆ.

ಇನ್ನೂ ಪವನ್ ಕಲ್ಯಾಣ್ ಇತ್ತೀಚಿಗೆ ಆಂಧ್ರದ ಹಿಂದೂವಾದಿ ಲೀಡರ್ ಅಂತಾನೆ ಗುರುತಿಸಿಕೊಳ್ತಾ ಇದ್ದಾರೆ. ತಿರುಪತಿ ಪ್ರಸಾದದ ವಿಚಾರದಲ್ಲಿ ಅಪಸವ್ಯ ನಡೆದಿದ್ದು ಗೊತ್ತಾದ ವೇಳೆ, ಖುದ್ದು ಪವನ್ ತಿರುಪತಿ ದೇಗುಲದ ಸ್ವಚ್ಚತಾ ಕಾರ್ಯದಲ್ಲಿ ಭಾಗವಸಿದ್ರು.

ಇತ್ತೀಚಿಗೆ ಪವನ್ ನಡೆ ನುಡಿ ನೋಡಿದವರು ಇವರು ಪಕ್ಕಾ ಹಿಂದೂ ಲೀಡರ್ ಆಗ್ತಿದ್ದಾರೆ ಅಂತಾ ಇದ್ದಾರೆ. ಅದರ ನಡುವೆ ಬರ್ತಾ ಇರೋ ಹರಿಹರ ವೀರಮಲ್ಲು ಸಿನಿಮಾ ಪವನ್​ರ ಈ ಇಮೇಜ್​ನ ಇನ್ನಷ್ಟು ಬಲಗೊಳಿಸೋದ್ರಲ್ಲಿ ಡೌಟೇ ಇಲ್ಲ. 

Related Video