
ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್, ವಿಜಯಲಕ್ಷ್ಮೀ ದರ್ಶನ್!
ನಟ ದರ್ಶನ್ ಬದುಕು ಅಯೋಮಯ ಆಗಿದೆ. ಹೆಂಗಾಂದ್ರು ಮಾಡಿ ಜೈಲಿನಿಂದ ಹೊರ ಬಂದ್ರೆ ಸಾಕಪ್ಪ ಅಂತ ದಾಸ ಸುಸ್ತು ಹೊಡೆದಿದ್ದಾರೆ. ಆದ್ರೆ 2026 ಆದ್ರೂ ದಾಸನ ಪಾಲಿಗೆ ಶುಭ ತರಲಿ ಅಂತ ಹೆಂಡತಿ ವಿಜಯಲಕ್ಷ್ಮಿ ಹೊಸ ವರ್ಷದಲ್ಲಿ ಶಕ್ತಿ ದೇವತೆ ಪೂಜೆ ಮಾಡಿದ್ದಾರೆ.
ಅದೇ ಶಕ್ತಿ ದೇವತೆಗೆ ನಟ ಕಿಚ್ಚ ಸುದೀಪ್ ನಮಿಸಿದ್ದು ಸಂಕಷ್ಟಗಳನ್ನ ಕೊನೆಗೊಳಿಸಪ್ಪಾ ಅಂತ ಬೇಡಿದ್ದಾರೆ. ಹಾಗಾದ್ರೆ ವಿಜಯಲಕ್ಷ್ಮೀ ದರ್ಶನ್ ಹಾಗು ಕಿಚ್ಚ ಸುದೀಪ್ ಒಂದೇ ದೇವರ ಮೊರೆ ಹೋಗಿದ್ದು ಎಲ್ಲಿ..? ಯಾಕೆ..? ನೋಡೋಣ ಬನ್ನಿ. : ನಟ ದರ್ಶನ್ಗೆ ನ್ಯೂ ಇಯರ್ ಪಾರ್ಟಿ ಇಲ್ಲ. ಜೈಲಲ್ಲೇ ಎಲ್ಲಾ... ದಾಸ ಹೊಸ ವರ್ಷಾಚರಣೆ ದಿನ ತನ್ನ ಗ್ಯಾಂಗ್ ಕಟ್ಟಿಕೊಂಡು ಮೈಸೂರಿನ ತೋಟದ ಮನೆ ಸೇರಿಬಿಡುತ್ತಿದ್ದ. ಅಷ್ಟೆ ಅಲ್ಲ ಮೈಸೂರಿನ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಬರ್ತಿದ್ದ. ಆದ್ರೆ ಈ ಭಾರಿ ಜೈಲಲೇ ಎಲ್ಲಾ. ಆದ್ರೆ ತನ್ನ ಗಂಡನಿಗಾಗಿ ಹೊಸ ವರ್ಷದ ದಿನ ದರ್ಶನ್ ಪತ್ನಿ ವಿಜಯಲಕ್ಷ್ಮೀ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸೋದು ಮರೆತಿಲ್ಲ.