ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ ಎಸ್‌ಪಿಬಿ
ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ, ನಮ್ಮೆಲ್ಲರ ಪ್ರೀತಿಯ ಬಾಲುಸರ್ ಭೂ ತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಬೆಂಗಳೂರು (ಸೆ. 26): ಸ್ವರ ಸಾಮ್ರಾಟ, ಗಾನ ಗಾರುಡಿಗ ಎಸ್‌ಪಿ ಬಾಲಸುಬ್ರಹ್ಮಣ್ಯಂ, ನಮ್ಮೆಲ್ಲರ ಪ್ರೀತಿಯ ಬಾಲುಸರ್ ಭೂ ತಾಯಿಯ ಮಡಿಲು ಸೇರಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ, ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಚೆನ್ನೈನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂಗೀತದ ಮೇರು ಶಿಖರ ಎಸ್‌ಪಿಬಿಯವರ ಬದುಕು, ಸಂಗೀತ, ನಟನೆ..
ಎಸ್‌ಪಿಬಿ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಒಂದು ಯುಗಾಂತ್ಯವೇ ಆಗಿದೆ ಎನ್ನಬಹುದು. 16 ಭಾಷೆ, 40 ಸಾವಿರಕ್ಕೂ ಹೆಚ್ಚು ಹಾಡುಗಳು, ತಪ್ಪುಗಳನ್ನು ಹುಡುಕಲು ಸಾಧ್ಯವೇ ಇಲ್ಲ ಎನ್ನುವಂತಹ ಪರ್ಫೆಕ್ಷನ್.. ಆಂಧ್ರಪ್ರದೇಶ ಜನ್ಮಭೂಮಿಯಾದರೆ ಕರ್ನಾಟಕ ಕರ್ಮಭೂಮಿ ಎನ್ನುತ್ತಿದ್ದರು ಎಸ್‌ಪಿಬಿ. ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿ ಬನ್ನಿ ಬಾಲು ಸರ್...