'ಗುರುದೇವ್ ಹೊಯ್ಸಳ'ನಾಗಿ ಘರ್ಜಿಸಿದ ಧನಂಜಯ್, ಡಾಲಿ ಖಡಕ್ ಅಧಿಕಾರಿನಾ? ಇಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್?
ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿರುವ 'ಗುರುದೇವ್ ಹೊಯ್ಸಳ' ಸಿನಿಮಾ ಬಗ್ಗೆ ಹಲವಾರು ವಿಚಾರಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.
ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿರುವ 'ಗುರುದೇವ್ ಹೊಯ್ಸಳ' ಸಿನಿಮಾ ಬಗ್ಗೆ ಹಲವಾರು ವಿಚಾರಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ್ದ ಧನಂಜಯ್ ಹೊಯ್ಸಳ ಎಂದ ತಕ್ಷಣ ಮೊದಲು ಊರು ನೆನಪು ಆಗುತ್ತೆ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ 25ನೇ ಸಿಮಾಕ್ಕೆ ಬಂದಿರುವುದು ತುಂಬಾ ಖುಷಿ ಇದೆ ಎಂದು ಹೇಳಿದರು, ಹಾಗೆ ಸಿನಿಮಾ ರಿಯಲ್ ಕಥೆ ಎಲ್ಲ ಕಡೆ ನಡೆಯುತ್ತಿರುವುದೇ ಆದ್ರೆ ಪಾತ್ರವಲ್ಲ ಎಂದು ತಿಳಿಸಿದ್ದಾರೆ. 'ಡಾಲಿ' ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿರುವ 'ಗುರುದೇವ್ ಹೊಯ್ಸಳ' ಮಾ.30ರಂದು 'ತೆರೆಗೆ ಬರಲಿದೆ. ಕರ್ನಾಟಕ ಮಾತ್ರವಲ್ಲದೆ, ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ ತೆರೆಕಾಣಲಿದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾದ ಈ ಸಿನಿಮಾವು ಧನಂಜಯ್ 25ನೇ ಸಿನಿಮಾಗಿದೆ.