ಹೃತಿಕ್-ಜೂ. ಎನ್‌ಟಿಆರ್ ಮಧ್ಯೆ ಶುರುವಾಯ್ತಾ ವಾರ್..? ಯಾಕೆ ಒಟ್ಟಿಗೇ ಬರಲ್ಲ ಅಂದಿದ್ದು?

ವಾರ್-2.. ಸದ್ಯ ಇಡೀ ಇಂಡಿಯಾ ದೊಡ್ಡ ನಿರೀಕ್ಷೆಯೊಂದಿಗೆ ಕಾಯ್ತಾ ಇರೋ ಸಿನಿಮಾ. ಒಂದು ಕಡೆ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್.. ಇನ್ನೊಂದು ಕಡೆಗೆ ಟಾಲಿವುಡ್​​ನ ಯಂಗ್ ಟೈಗರ್ ಜ್ಯೂ.NTR.. ಈ ಇಬ್ಬರೂ ದಿಗ್ಗಜರ ಸಮಾಗಮದ ವಾರ್ ಇದೇ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ.

Share this Video
  • FB
  • Linkdin
  • Whatsapp

ಯಶ್ ರಾಜ್ ಸ್ಪೈ ಯುನಿವರ್ಸ್​​ನ ಹೊಸ ಸಿನಿಮಾ ವಾರ್-2 (War 2) ರಿಲೀಸ್​ಗೆ ಸಜ್ಜಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ (Hrithik Roshan) - ಟಾಲಿವುಡ್ ಯಂಗ್ ಟೈಗರ್ ಎನ್.ಟಿ.ಆರ್ (Jr NTR) ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡ್ತಾ ಇರೋ ಸಿನಿಮಾ ಇದು. ಸಹಜವಾಗೇ ನಾರ್ತ್​​-ಸೌತ್ ಸ್ಟಾರ್ಸ್ ಸಮಾಗಮದ ಸಿನಿಮಾ ಬಗ್ಗೆ ಫ್ಯಾನ್ಸ್ ನಡುವೆ ದೊಡ್ಡ ನಿರೀಕ್ಷೆ ಇದೆ. ಆದ್ರೆ ಈ ಸಿನಿಮಾದಿಂದ ನಾರ್ತ್ ಸೌತ್ ನಡುವೆ ಮತ್ತೆ ವಾರ್ ಶುರುವಾಗಲಿದೆಯಾ..? ವಾರ್-2 ಸ್ಟಾರ್ಸ್ ನಡುವೆ ರಿಯಲ್ ವಾರ್ ಶುರುವಾಯ್ತಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ವಾರ್-2.. ಸದ್ಯ ಇಡೀ ಇಂಡಿಯಾ ದೊಡ್ಡ ನಿರೀಕ್ಷೆಯೊಂದಿಗೆ ಕಾಯ್ತಾ ಇರೋ ಸಿನಿಮಾ. ಒಂದು ಕಡೆ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್.. ಇನ್ನೊಂದು ಕಡೆಗೆ ಟಾಲಿವುಡ್​​ನ ಯಂಗ್ ಟೈಗರ್ ಜ್ಯೂ.NTR.. ಈ ಇಬ್ಬರೂ ದಿಗ್ಗಜರ ಸಮಾಗಮದ ವಾರ್ ಇದೇ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ.

ವಾರ್-2 ಮೂವಿ ಯಶ್ ರಾಜ್ ಸ್ಪೈ ಯುನಿವರ್ಸ್​ನ ಲೇಟೆಸ್ಟ್ ಸಿನಿಮಾ. ಹೈ ವೋಲ್ಟೇಜ್ ಌಕ್ಷನ್ ಥ್ರಿಲ್ಲರ್ ಚಿತ್ರವಾಗಿರೋ ವಾರ್-2 ಬಜೆಟ್ ಭರ್ತಿ 200 ಕೋಟಿ. ಸೌತ್-ನಾರ್ತ್ ಸೂಪರ್ ಸ್ಟಾರ್ಸ್ ಕಾಂಬೋ ಇರುವ ಈ ಸಿನಿಮಾ ಬಗ್ಗೆ ಸಹಜವಾಗೇ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಆದ್ರೆ ಯಾವ ಹೃತಿಕ್-ಎನ್.ಟಿ.ಆರ್ ಕಾಂಬೋ ಕಾರಣಕ್ಕೆ ವಾರ್ -2 ಬಗ್ಗೆ ನಿರೀಕ್ಷೆ ಇತ್ತೋ ಅದೇ ಸ್ಟಾರ್ ಗಳ ನಡುವೆ ಈಗ ಅಸಲಿ ವಾರ್ ಶುರುವಾಗಿದೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಹೌದು ಇಷ್ಟಪಟ್ಟು ಒಟ್ಟಿಗೆ ನಟಿಸಿರೋ ಎನ್.ಟಿ.ಆರ್ ಮತ್ತು ಹೃತಿಕ್ ಈಗ ದೂರ ದೂರ ಆಗಿದ್ದಾರಂತೆ. ಸಿನಿಮಾಕ್ಕೆ ಇಬ್ಬರೂ ಒಟ್ಟಿಗೆ ಬರೋದಿಲ್ವಂತೆ. ಇಬ್ಬರೂ ತಾರೆಯರು ಪ್ರತ್ಯೇಕವಾಗಿ ಪ್ರಚಾರ ಮಾಡಲಿದ್ದಾರಂತೆ.

ಅಸಲಿಗೆ ವಾರ್-2 ಟೀಸರ್ ಬಂದಾಗಲೇ ಎನ್.ಟಿ.ಆರ್ ಮತ್ತು ಹೃತಿಕ್ ಫ್ಯಾನ್ಸ್ ನಡುವೆ ಫ್ಯಾನ್ ವಾರ್ ಶುರುವಾಗಿತ್ತು. ಹೃತಿಕ್​ಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಬಾಲಿವುಡ್ ಮಂದಿ ತಮ್ಮ ಬುದ್ದಿ ತೋರಿಸಿದ್ರು ಅಂತ ಸೌತ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ರು.

ಅತ್ತ ಹೃತಿಕ್ ಫ್ಯಾನ್ಸ್, ಕೂಡ ಇದಕ್ಕೆ ಟಾಂಗ್ ಕೊಡಲಿಕ್ಕೆ ಶುರುಮಾಡಿದ್ರು. ಆದ್ರೆ ಫ್ಯಾನ್ ವಾರ್ ಹಂತದಲ್ಲಿ ಇದ್ದ ಕಹಾನಿ ಈಗ ಸ್ಟಾರ್ ವಾರ್ ಹಂತಕ್ಕೆ ಹೋದಂತಿದೆ. ಡೇಟ್ಸ್ ಕಾರಣ ಹೇಳಿ ಇಬ್ಬರೂ ತಾರೆಯರು ಪ್ರಮೋಷನ್​ನಲ್ಲಿ ಮುಖಾಮುಖಿ ಆಗೋದನ್ನ ತಪ್ಪಿಸಿಕೊಳ್ತಾ ಇದ್ದಾರಂತೆ.

ಈ ಇಬ್ಬರೂ ಹೀಗೆ ಒಟ್ಟಾಗಿ ಪ್ರಚಾರ ಮಾಡದೇ ಹೋದ್ರೆ ಅದು ಸೌತ್ ವೆರ್ಸಸ್ ನಾರ್ತ್ ಫ್ಯಾನ್ಸ್ ವಾರ್​ಗೂ ಕಾರಣ ಆಗಬಹುದು. ಈ ಹಿಂದೆ ಸೌತ್ ಸಿನಿಮಾಗಳು ಮತ್ತು ಬಾಲಿವುಡ್ ನಡುವೆ ದೊಡ್ಡ ದೊಡ್ಡ ವಾರ್ ನಡೆದಿತ್ತು. ವಾರ್-2 ಮೂವಿಯಲ್ಲಿ ಈ ಇಬ್ಬರೂ ಸೌತ್ ನಾರ್ಥ್ ಸೂಪರ್ ಸ್ಟಾರ್ಸ್ ಒಂದಾಗಿದ್ದು ನೋಡಿ ಆ ಅಂತರ ಸರಿಹೋಗುತ್ತೆ ಎನ್ನಲಾಗಿತ್ತು. ಆದ್ರೆ ಈಗ ನೋಡಿದ್ರೆ ಹೃತಿಕ್-ಎನ್.ಟಿಆರ್ ನಡುವೆಯೇ ವಾರ್ ಶುರುವಾದಂತಿದೆ.

ಅಷ್ಟಕ್ಕೂ ಹೃತಿಕ್ ಮತ್ತು ಎನ್.ಟಿ.ಆರ್ ನಡುವೆ ಏನಾಗಿದೆ ಅನ್ನೋದಂತೂ ಯಾರಿಗೂ ಗೊತ್ತಿಲ್ಲ. ಆದ್ರೆ ಸ್ಕ್ರೀನ್ ಶೇರ್ ಮಾಡೋದಕ್ಕೆ ಒಪ್ಪಿಕೊಂಡ ಈ ಇಬ್ಬರೂ ಈಗ ಪ್ರಮೋಷನಲ್ ಇವೆಂಟ್​​ನಲ್ಲಿ ಸ್ಟೇಜ್ ಶೇರ್ ಮಾಡೋದಕ್ಕೆ ಹಿಂದೇಟು ಹಾಕ್ತಾ ಇದ್ದಾರೆ. ಅಲ್ಲಿಗೆ ವಾರ್-2 ಸ್ಟಾರ್ಸ್ ನಡುವೆ ರಿಯಲ್ ವಾರ್ ಶುರುವಾಗಿದೆಯಾ..? ಇದು ಮತ್ತೆ ಸೌತ್-ನಾರ್ತ್​ ಇಂಡಸ್ಟ್ರಿಗಳ ನಡುವೆ ಕಂದಕ ಸೃಷ್ಟಿಸಲಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

Related Video