ರಕ್ಷಿತ್ ತೀರ್ಥಹಳ್ಳಿ 'ತಿಮ್ಮನ ಮೊಟ್ಟೆಗಳು' ಚಿತ್ರಕ್ಕೆ ಹಾರೈಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪುತ್ರ ನಿಖಿಲ್

ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹಾಕಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ಬರೆದಿರುವ 'ಕಾಡಿನ ನೆಂಟರು' ಕಥಾ ಸಂಕಲನದಿಂದ ಆಯ್ದ ಒಂದು ಕಥೆ 'ತಿಮ್ಮನ ಮೊಟ್ಟೆಗಳು' ಈಗ ಸಿನಿಮಾ ರೂಪ ಪಡೆದಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ..

Share this Video
  • FB
  • Linkdin
  • Whatsapp

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ 'ತಿಮ್ಮನ ಮೊಟ್ಟೆಗಳು' ಚಿತ್ರವು ಇದೇ ತಿಂಗಳು, ಅಂದರೆ ಜೂನ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹೊಸಬಟ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಗು ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು 'ತಿಮ್ಮನ ಮೊಟ್ಟೆಗಳು ಚಿತ್ರವು ಯಶಸ್ಸು ಕಾಣಲಿ ಎಂದು ಹರಸಿ, ಹಾರೈಸಿದ್ದಾರೆ.

ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹಾಕಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ಬರೆದಿರುವ 'ಕಾಡಿನ ನೆಂಟರು' ಕಥಾ ಸಂಕಲನದಿಂದ ಆಯ್ದ ಒಂದು ಕಥೆ 'ತಿಮ್ಮನ ಮೊಟ್ಟೆಗಳು' ಈಗ ಸಿನಿಮಾ ರೂಪ ಪಡೆದಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರದ ಪ್ರಮುಖ ಕಥೆಯಿದ್ದು, ಮನುಷ್ಯನಲ್ಲಿರುವ ಹಾಗೆ ಪ್ರಾಣಿಗಳಲ್ಲೂ ಬಾಂಧವ್ಯವಿದೆ.

'ಈತರಹದ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕರು ಇತ್ತೀಚೆಗೆ ಅಮೇರಿಕಾದ ಡಾಲಸ್ ನಲ್ಲಿ ಪ್ರಿಮೀಯರ್ ಶೋ ಸಹ ಆಯೋಜಿಸಿದ್ದರು. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ 'ತಿಮ್ಮನ ಮೊಟ್ಟೆಗಳು' ನಿರ್ದೇಶಕರಾದ ರಕ್ಷಿತ್ ತೀರ್ಥಹಳ್ಳಿ.

'ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ' ಎಂದು ಹಿರಿಯ ನಟ ಸುಚೇಂದ್ರ ಪ್ರಸಾದ್ ಕೂಡ ತಿಳಿಸಿದ್ದಾರೆ.

ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ, ನಟಿ ಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್ ಜೋಯಿಷ್ ಕೂಡ ಈ ಚಿತ್ರ ಹಾಗೂ ತಮ್ಮತಮ್ಮ ಪಾತ್ರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾತನ್ನಾಡಿದ್ದಾರೆ. ಅಂದಹಾಗೆ,ಈ ಚಿತ್ರವು ಇದೇ 27 ರಂದು, (27 ಜೂನ್ 2025) ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. 

Related Video