Love Mocktail 2: ಮತ್ತೆ ಕಮಾಲ್ ಮಾಡೋಕೆ ನಿಧಿಮಾ-ಆದಿ ರೆಡಿ..!

ಲವ್ ಮಾಕ್‌ಟೇಲ್ (Love Mocktail)  ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನ ನಾಗರಾಜ್ (Milana Nagaraj) ಜೋಡಿಯ ಸೂಪರ್ ಡೂಪ್ ಹಿಟ್ ಸಿನಿಮಾ. 

Share this Video
  • FB
  • Linkdin
  • Whatsapp

 ಲವ್ ಮಾಕ್‌ಟೇಲ್ (Love Mocktail) ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನ ನಾಗರಾಜ್ (Milana Nagaraj) ಜೋಡಿಯ ಸೂಪರ್ ಡೂಪ್ ಹಿಟ್ ಸಿನಿಮಾ. ಆದಿ ನಿಧಿಮಾ ಮಾಡಿದ ಮೋಡಿ ಇಡೀ ಸೌತ್ ಸಿನಿ ರಂಗವನ್ನೇ ಆವರಿಸಿಕೊಂಡಿತ್ತು. ಇದೇ ಲವ್ ಮಾಕ್ಟೆಲ್ ಸಿನಿಮಾ ಟಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ. ಈ ಮಧ್ಯೆ ಕನ್ನಡದಲ್ಲಿ ಆದಿ ನಿಧಿಮಾ ಮುಂದುವರೆದ ಭಾಗ ಲವ್ ಮಾಕ್ಟೇಲ್-2 ಸಿನಿಮಾ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಮುಂದಿನ ವರ್ಷ ಫೆಬ್ರವರಿ 11ರಂದು ಲವ್ ಮಾಕ್ಟೇಲ್- 2 ಮೂಲಕ ಆದಿ ನಿಧಿಮಾ ಕಮಾಲ್ ಮಾಡಲಿದ್ದಾರೆ. 

Dolly Dhananjya's Badava Rascal: ಮಸ್ತ್ ಆಗಿದೆ 'ಬಡವಾ ರಾಸ್ಕಲ್' ಟೈಟಲ್ ಹಾಡು..!

ಲವ್ ಮಾಕ್ಟೇಲ್ -2 ಅಪ್ಪಟ ಪ್ರೇಮ ಕಥೆಯ ಸಿನಿಮಾ. ಮಿಲನಾ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ನಿಜ ಜೀವನಲ್ಲಿ ಪ್ರೀತಿಸುತ್ತಿದ್ದಾಗ ಲವ್ ಮಾಕ್ಟೆಲ್ -1 ಮಾಡಿದ್ದರು. ಈಗ ಮಿಲನಾ ಹಾಗೂ ಕೃಷ್ಣ ಪ್ರೀತಿಸಿ ಮದುವೆ ಆಗಿದ್ದಾರೆ. ಲವ್ ಮಾಡಿ ಮದುವೆ ಆದ ಈ ಜೋಡಿ ಈಗ ಪ್ರೇಮಿಗಳಿಗಾಗೆ ಲವ್ ಮಾಕ್ಟೇಲ್ ಪಾರ್ಟ್-2 ಸಿನಿಮಾವನ್ನ ಸಿದ್ಧಪಡಿಸಿದ್ದಾರೆ. ಲವ್ ಎಮೋಷನ್ ಬ್ಲೆಂಡ್ ಮಾಡಿ ಕತೆ ಹೆಣೆದಿರೋ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್- 2ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ - 2 ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ ಆಗಿರೋದ್ರಿಂದ ಮೂರು ದಿನ ಮೊದಲೇ ಲವ್ ಮಾಕ್ಟೇಲ್ -2 ತೆರೆ ಮೇಲೆ ಬರ್ತಿದೆ.

Related Video