ಮುಖ್ಯಮಂತ್ರಿ ಮಗನಿಗೆ ಬುದ್ಧಿ ಹೇಳಿದ ಬಿಗ್‌ಬಾಸ್‌ ವಿನ್ನರ್‌ ಪ್ರಥಮ್: ಎಲ್ಲ ಧರ್ಮ ಗೌರವಿಸುವಂತೆ ತಾಕೀತು

ಸನಾತನ ಧರ್ಮ ನಿರ್ಮೂಲನೆ ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ಗೆ ಬಿಗ್‌ಬಾಸ್‌ ವಿನ್ನರ್‌ ಒಳ್ಳೆಯ ಹುಡುಗ ಪ್ರಥಮ್‌ ಬುದ್ಧಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಾಮರಾಜನಗರ (ಸೆ.06): ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮ ನಿರ್ಮೂಲನೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಗ್‌ಬಾಸ್‌ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್‌, ನಿನಗಿಷ್ಟ ಇಲ್ಲ ಅಂದ್ರೆ ಬೇಡಕಣಯ್ಯ, ನಿನಗ್ಯಾರಯ್ಯ ಹೇಳಿದ್ದು ಪೂಜೆ ಮಾಡು ಅಂತಾ? ಎಲ್ಲರಿಗೂ ಅವರದ್ದೇ ಧರ್ಮ ಇದೆ, ಎಲ್ಲಾ ಧರ್ಮವನ್ನು ಗೌರವಿಸ ಬೇಕು ಎಂದು ತಾಕೀತು ಮಾಡಿದ್ದಾರೆ.

ಮುಂದುವರೆದು, ಬೇರೆಯವರ ಭಾವನೆಗಳನ್ನು ನೋಯಿಸಿದರೆ ನಮ್ಮನ್ನು ಮನುಷ್ಯರು ಅಂತಾರಾ? ಎಲ್ಲರಿಗು ಅವರದ್ದೇ ಆದ ಧರ್ಮ ಇದೆ ನಂಬಿಕೆ ಇದೆ, ನಿನಗಿಷ್ಟ ಇಲ್ಲ ಅಂದ್ರೆ ಬೇಡ. ಸನಾತನ ಧರ್ಮ ಬಹಳ ಕಾಲದಿಂದ ಇದೆ. ಪ್ರತಿಯೊಂದು ಧರ್ಮವನ್ನು ಗೌರವಿಸಬೇಕು. ಆದರೆ ಸಾರ್ವಜನಿಕವಾಗಿ ಹೆಂಗೆಂಗೋ ಮಾತಾಡೋದು ಸರಿಯಲ್ಲ. ಒಂದು ಬಾರಿ ಹೇಳಿದ ಮೇಲೆ ತಿದ್ಕೊಬಹುದು ಅಂದ್ಕೊಂಡಿದ್ದೆನು. ಒಂದು ಬಾರಿ ನೀಡಿದ ಹೇಳಿಕೆ ತಪ್ಪಾಗಿದ್ರೆ ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿವೆ. ಆದ್ರೆ ನಾನು ಹೇಳಿದ್ದೆ ಸರಿ, ನಾನು ಹಂಗೆ ಹೇಳೋದು ಅಂದರೆ ಎಷ್ಟೋ ಜನರ ಭಾವನೆಗಳಿಗೆ ನೋವಾಗುತ್ತದೆ. ಪದೇ ಪದೆ ಅದನ್ನೆ ಹೇಳ್ತೀನಿ ಅಂದ್ರೆ ಅದು ಉಡಾಫೆ ಆಗುತ್ತದೆ ಎಂದು ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ನಟ ಪ್ರಥಮ್ ಕಿಡಿಕಾರಿದ್ದಾರೆ.

Related Video