ಮತ್ತೆ ಬಣ್ಣ ಹಚ್ಚಿದ ಡಿಸಿಎಂ ಪವನ್ ಕಲ್ಯಾಣ್, ಈ ಚಿತ್ರದ ವಿಶೇ‍ಷತೆ ತಿಳಿದರೆ ಸ್ಟನ್ ಆಗ್ತೀರಾ!

ರಾಜಕೀಯದ ನಡುವೆ ಮತ್ತೆ ಸಿನಿಮಾಗಳಿಗೆ ಸಮಯ ಕೊಡ್ತಾ ಇದ್ದಾರೆ ಪವನ್ ಕಲ್ಯಾಣ್. ಹರಿಹರ ವೀರಮಲ್ಲು ಸಿನಿಮಾ ಮುಗಿಸಿಕೊಡೋದ್ರ ಜೊತೆಗೆ ಉತ್ಸಾದ್ ಭಗತ್​​ಸಿಂಗ್ ಸಿನಿಮಾಗೂ ಮರುಚಾಲನೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್. ಸದ್ಯ ಈ ಸಿನಿಮಾದ ಶೂಟಿಂಗ್ ಮರುಪ್ರಾರಂಭ ಆಗಿದ್ದು ಭರದಿಂದ

Share this Video
  • FB
  • Linkdin
  • Whatsapp

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬರೋಬ್ಬರಿ ಐದು ವರ್ಷಗಳ ನಂತರ ಚಿತ್ರೀಕರಣ ಮುಗಿಸಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದಸರಾಗೆ ಚಿತ್ರ ತೆರೆಗೆ ಬರಲಿದೆ. ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರಿಂದ ‘ಹರಿ ಹರ ವೀರ ಮಲ್ಲು’ ಮಾತ್ರ ಅಲ್ಲದೆ ಪವನ್ ನಟನೆಯ ಇನ್ನೂ ಎರಡು ಸಿನಿಮಾಗಳು ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಅದ್ರಲ್ಲೂ ಪವನ್ ಡಿಸಿಎಂ ಆದ ಮೇಲೆ ಈ ಸಿನಿಮಾಗಳ ಭವಿಷ್ಯ ಏನಾಗುತ್ತೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು. ಇದೀಗ ರಾಜಕೀಯದ ನಡುವೆ ಮತ್ತೆ ಸಿನಿಮಾಗಳಿಗೆ ಸಮಯ ಕೊಡ್ತಾ ಇದ್ದಾರೆ ಪವನ್ ಕಲ್ಯಾಣ್. ಹರಿಹರ ವೀರಮಲ್ಲು ಸಿನಿಮಾ ಮುಗಿಸಿಕೊಡೋದ್ರ ಜೊತೆಗೆ ಉತ್ಸಾದ್ ಭಗತ್​​ಸಿಂಗ್ ಸಿನಿಮಾಗೂ ಮರುಚಾಲನೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್. ಸದ್ಯ ಈ ಸಿನಿಮಾದ ಶೂಟಿಂಗ್ ಮರುಪ್ರಾರಂಭ ಆಗಿದ್ದು ಭರದಿಂದ ಚಿತ್ರೀಕರಣ ನಡೀತಿದೆ.

Related Video