
ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
ಭಾರತೀಯ ಚಿತ್ರರಂಗದ ಕ್ವೀನ್ ರಶ್ಮಿಕಾ ಮಂದಣ್ಣ ಮನದಲ್ಲಿ ಈಗ ಮದುವೆ ನಾಧ ಶುರುವಾಗಿದೆ. ಪ್ರೀತಿಸಿದ ಹುಡುಗನ ಜೊತೆ ರಶ್ಮಿಕಾ ಹಸೆಮಣೆ ಏರಿ ಸಂಸಾರ ಶುರು ಮಾಡೋದೊಂದೇ ಭಾಕಿ. ಅಷ್ಟರಲ್ಲಾಗಲೇ ಈಯರ್ ಎಂಡ್ಅನ್ನ ರಶ್ಮಿಕಾ ತನ್ನ ಭಾಯ್ ಫ್ರೆಂಡ್ ಕುಟುಂಬದ ಜೊತೆಗೆ ಆಚರಿಸಿದ್ದಾರೆ.
ಹಾಗಾದ್ರೆ ಶ್ರೀವಲ್ಲಿಯ ಹೊಸ ವರ್ಷಾಚರಣೆ ಹೇಗಿತ್ತು..? ಎಲ್ಲಾಯ್ತು..? ರಶ್ಮಿಕಾ ಮದುವೆ ಡೇಟ್ ಏನು..? ಎಲ್ಲಿ ಮದುವೆ ಆಗುತ್ತಾರೆ..? ನೋಡೋಣ ಬನ್ನಿ. ಶ್ರೀವಲ್ಲಿ ರಶ್ಮಿಕಾ ಮಂದಣ್ಣಗೆ 2026 ಭಾರಿ ನಿರೀಕ್ಷೆಯ ವರ್ಷ. ಯಾಕಂದ್ರೆ ಈ ನ್ಯಾಷನಲ್ ಕ್ರಶ್ ತನ್ನ ಜೀವನದಲ್ಲಿ ಹೊಸದೊಂದು ಅಧ್ಯಾಯಕ್ಕೆ ಸಜ್ಜಾಗುತ್ತಿದ್ದಾರೆ. ಅದುವೇ ಮದುವೆ ಅಧ್ಯಾಯ. ಇಷ್ಟು ದಿನ ಬ್ಯಾಚ್ಯೂಲರ್ ಆಗಿದ್ದ ರಶ್ಮಿಕಾ ಮಂದಣ್ಣ ಈ ವರ್ಷ ಮಾರ್ಚ್ ಒಳಗೆ ಸಂಸಾರಿ ಆಗಿರುತ್ತಾರೆ.