Asianet Suvarna News Asianet Suvarna News

ವಿದ್ಯಾಗಮ ಶಿಕ್ಷಕರಿಗೆ ಕೊರೊನಾ; ಬಂದ್ ಆಗುತ್ತಾ ವಠಾರ ಶಾಲೆ? ಸುರೇಶ್ ಕುಮಾರ್ ಹೇಳಿದ್ದಿದು

Oct 10, 2020, 2:06 PM IST

ಬೆಂಗಳೂರು (ಅ. 10): ವಿದ್ಯಾಗಮ ಶಾಲೆ ಆರಂಭವಾದ ನಂತರ ಶಿಕ್ಷಕರು, ಮಕ್ಕಳಿಗೆ ಕೊರೊನಾ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಶಿಕ್ಷಕರ ಸಾವಿನ ಬಗ್ಗೆ, ಸೋಂಕಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆಗೆ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ. ಆ ಬಳಿಕ ಸಿಎಂ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 

ಕಲ್ಬುರ್ಗಿ ವಠಾರ ಶಾಲೆಯ ರೂವಾರಿ ದಿಢೀರನೆ ಎತ್ತಂಗಡಿ; ಕಾರಣ ಮಾತ್ರ ಅಚ್ಚರಿ!

ಶಾಲೆ ಪುನಾರಂಭದ ಬಗ್ಗೆ ಚರ್ಚೆ ಶುರುವಾಗಿದೆ. ಅದರ ಮಧ್ಯೆ ಈಗಾಗಲೇ ಶುರುವಾಗಿರುವ ವಿದ್ಯಾಗಮದ ಅಪಾಯದ ಬಗ್ಗೆ ವರದಿಯಾಗುತ್ತಿದೆ. ಶಿಕ್ಷಕರಿಗೆ, ಅವರಿಂದ ಮಕ್ಕಳಿಗೆ ಸೋಂಕು ತಗುಲುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರು ಸಾವನ್ನಪ್ಪಿರುವ ಘಟನೆಯೂ ಇದೆ. ಇವೆಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.