
ಅ. 15 ರಿಂದ ಶಾಲೆ ಆರಂಭಕ್ಕೆ ಸಮ್ಮತಿ: ಪೋಷಕರೇ ನಿಮಗೂ ಇದೆ ಈ ನಿಯಮಗಳು!
ಇಂದಿನಿಂದ ಅನ್‌ಲಾಕ್ 5.0 ಜಾರಿಯಾಗಿದೆ. ಅ. 15 ರ ನಂತರ ಹಂತಹಂತವಾಗಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಆದರೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಬೆಂಗಳೂರು (ಅ. 01): ಇಂದಿನಿಂದ ಅನ್‌ಲಾಕ್ 5.0 ಜಾರಿಯಾಗಿದೆ. ಅ. 15 ರ ನಂತರ ಹಂತಹಂತವಾಗಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಆದರೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅ. 15 ರಿಂದ ಥಿಯೇಟರ್ ಆರಂಭಕ್ಕೆ ಸಮ್ಮತಿ; ಆದರೆ ಈ ಕಂಡಿಶನ್‌ಗಳು ಅಪ್ಲೈಯಾಗುತ್ತೆ!
ವಿದ್ಯಾರ್ಥಿಗಳ ಪಾಲಕರ ಲಿಖಿತ ಅನುಮತಿ ಅಗತ್ಯ. ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಒಂದು ವೇಳೆ ವಿದ್ಯಾರ್ಥಿ ಶಾಲೆಗೆ ಬರಲು ಇಚ್ಚಿಸದೆ ಆನ್‌ಲೈನ್ ಕ್ಲಾಸ್ ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.