ಸರ್ಕಾರದ ಆದೇಶ ಉಲ್ಲಂಘನೆ, ಖಾಸಗಿ ಶಾಲೆಯಿಂದ ಪಾಠ ಶುರು: ಶಿಕ್ಷಣ ಸಚಿವರೇ ಗಮನಿಸಿ

ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬೆಂಗಳೂರಿನ ಖಾಸಗಿ ಶಾಲೆಯೊಂದು ಆದೇಶ ಉಲ್ಲಂಘನೆ ಮಾಡಿ ತರಗತಿಯನ್ನು ಆರಂಭಿಸಿದೆ. 

First Published Oct 1, 2020, 1:34 PM IST | Last Updated Oct 1, 2020, 1:34 PM IST

ಬೆಂಗಳೂರು (ಅ. 01): ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಬೆಂಗಳೂರಿನ ಖಾಸಗಿ ಶಾಲೆಯೊಂದು ಆದೇಶ ಉಲ್ಲಂಘನೆ ಮಾಡಿ ತರಗತಿಯನ್ನು ಆರಂಭಿಸಿದೆ. 

ಶಾಲಾ- ಕಾಲೇಜು ಪುನಾರಂಭ ಅ. 10 ನಂತರ ನಿರ್ಧಾರ: ಸುರೇಶ್ ಕುಮಾರ್

ಕಸ್ತೂರಬಾ ನಗರದಲ್ಲಿರುವ ಅಯಿಷಾ ಇಂಗ್ಲೀಷ್ ಸ್ಕೂಲ್ 7,8, 9, ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದೆ. ಅ. 15 ರವರೆಗೆ ಶಾಲೆ ತೆರೆಯಲು ಇನ್ನೂ ಸಮ್ಮತಿ ಸಿಕ್ಕಿಲ್ಲ. ಇವರು ಮಾತ್ರ ಸರ್ಕಾರದ ಆದೇಶಕ್ಕೆ ಬೆಲೆ ನೀಡದೇ ಶಾಲೆ ಆರಂಭಿಸಿದ್ದಾರೆ. ಮಕ್ಕಳ ಆರೋಗ್ಯಕ್ಕೆ ಇಲ್ಲಿ ಯಾರು ಹೊಣೆ? ಮಾನ್ಯ ಸುರೇಶ್ ಕುಮಾರ್ ಅವರೇ ದಯವಿಟ್ಟು ಗಮನಿಸಿ