Asianet Suvarna News Asianet Suvarna News

NEET ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾರ್ಥಿನಿ ದೇಶಕ್ಕೆ ದ್ವಿತೀಯ

Nov 4, 2021, 10:25 AM IST
  • facebook-logo
  • twitter-logo
  • whatsapp-logo

ಪುತ್ತೂರು (ನ.04):   ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾರ್ಥಿನಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಅಂಗ ವೈಕಲ್ಯ ಮೆಟ್ಟಿ ನಿಂತು ನೀಟ್ ಪ್ರವೇಶ‌ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸಾಧನೆ ಮಾಡಿದ್ದಾಳೆ.  ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿ  ನೀಟ್ ಪ್ರವೇಶ ಪರೀಕ್ಷೆಯ ಪಿಡಬ್ಲ್ಯುಡಿ(ಅಂಗವೈಕಲ್ಯವುಳ್ಳವರ) ವಿಭಾಗದಲ್ಲಿ ದೇಶಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದಾಳೆ. 

 NEET ಪರೀಕ್ಷೆಯಲ್ಲು ಪುತ್ತೂರಿನ ಸಿಂಚನಾ ಲಕ್ಷ್ಮೀ ಸಾಧನೆ, ರಾಘವೇಶ್ವರ ಶ್ರೀಗಳಿಂದ ಸನ್ಮಾನ
ನೀಟ್ ಪರೀಕ್ಷೆಯಲ್ಲಿ 720ಕ್ಕೆ 658 ಅಂಕ ಪಡೆದು ಸಿಂಚನಾಲಕ್ಷ್ಮಿ ಸಾಧನೆ ಮಾಡಿದ್ದು, ಜನ್ಮಜಾತ ಬೆನ್ನುಮೂಳೆ ವೈಕಲ್ಯದಿಂದ ಬಳಲುತ್ತಿರುವ ಸಿಂಚನಾ ಲಕ್ಷ್ಮಿ 5 ರಿಂದ 9ನೇ ತರಗತಿ ನಡುವೆ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಆದರೆ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಸದ್ಯ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನೀಟ್ ಅಖಿಲ ಭಾರತ ಮಟ್ಟದಲ್ಲಿ ಸಾಮಾನ್ಯ ವಿಭಾಗದಲ್ಲೂ 2,856ನೇ ರ‍್ಯಾಂಕ್ ಪಡೆದಿದ್ದಾರೆ.