Menase School: ಶೃಂಗೇರಿಯ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆಯೊಂದಿದೆ. ಖಾಸಗಿ ಶಾಲೆ ಬಿಟ್ಟು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದು, ಪ್ರವೇಶಾತಿಗೆ ಬಂದ ಹಲವು ವಿದ್ಯಾರ್ಥಿಗಳು ಸೀಟ್ ಸಿಗದೆ ನಿರಾಶರಾಗಿ ಹಿಂತಿರುಗಿದ್ದಾರೆ.

First Published Feb 20, 2022, 10:21 AM IST | Last Updated Feb 20, 2022, 10:21 AM IST

ಚಿಕ್ಕಮಗಳೂರು(ಫೆ.20): ಚಿಕ್ಕಮಗಳೂರು (chikkamagaluru) ಜಿಲ್ಲೆ ಶೃಂಗೇರಿ (Sringeri) ತಾಲೂಕಿನ ಮೆಣಸೆಯಲ್ಲಿ (Menase) ಹೈಟೆಕ್ ಶಾಲೆಯೊಂದಿದೆ. ಈ ಶಾಲೆಯಲ್ಲಿ ಶಾಲೆಗೆ ಬರೋದಕ್ಕೂ ಬಸ್‌. ಹೋಗೋದಕ್ಕೂ ಬಸ್, ಸ್ಮಾರ್ಟ್‍ಕ್ಲಾಸ್, ಕಂಪ್ಯೂಟರ್ ಲ್ಯಾಬ್‌, ಗ್ರಂಥಾಲಯ, ಊಟದ ಸೌಲಭ್ಯ, ಆಟವಾಡಲು ಸುಸಜ್ಜಿತ ಪಾರ್ಕ್ ಇದ್ದು, ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂಬಂತಿದೆ.  ಇಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಮಕ್ಕಳು ಓದುತ್ತಿದ್ದು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ  ಬೋಧನೆ ಮಾಡಲಾಗುತ್ತಿದೆ. 

UDUPI GOVERNMENT SCHOOL: ಶಾಲಾ ಮಕ್ಕಳಿಗೆ ಅಶೋಕ್‌ರಿಂದ ಜೀವನ ಪಾಠ

ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು  ಕೂಡ ಹೆಚ್ಚು ಆಸಕ್ತರಾಗಿದ್ದು, ಈ ಬಾರಿ ದಾಖಲಾಗಲು ಬಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು (Students) ವಿಧಿಯಿಲ್ಲದೇ ವಾಪಸ್  ಮನೆಗೆ ಕಳುಹಿಸಿದ್ದಾರೆ.  ಈ ಶಾಲೆಯಲ್ಲಿ  320 ವಿದ್ಯಾರ್ಥಿಗಳಿದ್ದು   ಈ ಶಾಲೆಗೆ (School) ಕೇವಲ ಮೆಣಸೆ ಸುತ್ತಮುತ್ತಲಿನ ಮಕ್ಕಳು ಮಾತ್ರ ಬರುತ್ತಿಲ್ಲ. ಮೆಣಸೆಯಿಂದ 25-30 ಕಿ.ಮೀ. ದೂರದ ಕೊಪ್ಪ, ಎನ್‌ಆರ್‌ ಪುರ ತಾಲೂಕಿನ ಮಕ್ಕಳು ಕೂಡ ಈ ಶಾಲೆಗೆ ಬರುತ್ತಿದ್ದಾರೆ.