Asianet Suvarna News Asianet Suvarna News

ಕಲ್ಬುರ್ಗಿ ಮಾಶಾಳ ಗ್ರಾಮದ 19 ವಠಾರ ಶಾಲೆಗಳು ಬಂದ್!

Oct 10, 2020, 10:00 AM IST

ಬೆಂಗಳೂರು (ಅ. 10): ಕಲ್ಬುರ್ಗಿ ಮಾಶಾಳ ಗ್ರಾಮದ ವಠಾರ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರು ಮಕ್ಕಳಿಗೆ ಸೋಂಕು ಹರಡಿದೆ. ಇದು ವರದಿಯಾಗುತ್ತಿದ್ದು ಮಾಶಾಳ ಗ್ರಾಮದ 19 ವಠಾರ ಶಾಲೆಗಳನ್ನು ಬಂದ್ ಮಾಡಲಾಗಿದೆ. 

ಒಟ್ಟು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು. 40 ವಿದ್ಯಾರ್ಥಿಗಳಂತೆ ಒಂದೊಂದು ಗುಂಪು ವಠಾರ ಶಾಲೆಯಲ್ಲಿ ಪಾಠ ಮಾಡಲಾಗುತ್ತಿತ್ತು. ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ 19 ವಠಾರ ಶಾಲೆಯನ್ನು ಬಂದ್ ಮಾಡಲಾಗಿದೆ. ಇದು ಸುವರ್ಣ ನ್ಯೂಸ್- ಕನ್ನಡ ಪ್ರಭ ವರದಿಯ ಇಂಪ್ಯಾಕ್ಟ್!