Asianet Suvarna News Asianet Suvarna News

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಚಕ್ರತೀರ್ಥ ಅಲ್ಲ, ವಕ್ರತೀರ್ಥ ಎಂದು ಕುಂ ವೀ ಆಕ್ರೋಶ

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಾರ್ ಮುಂದುವರೆದಿದೆ. ಸರ್ಕಾರದ ನಡೆಗೆ ಹಿರಿಯ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಚಕ್ರತೀರ್ಥ ವಿರುದ್ಧ ಸಾಹಿತಿ ಕುಂ ವೀ ಅಸಮಾಧಾನ ಹೊರಹಾಕಿದ್ದಾರೆ. 

ಬೆಂಗಳೂರು (ಮೇ.29): ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಾರ್ ಮುಂದುವರೆದಿದೆ. ಸರ್ಕಾರದ ನಡೆಗೆ ಹಿರಿಯ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಹಿತ್ ಚಕ್ರತೀರ್ಥ ವಿರುದ್ಧ ಸಾಹಿತಿ ಕುಂ ವೀ ಅಸಮಾಧಾನ ಹೊರಹಾಕಿದ್ದಾರೆ. 

'ರೋಹಿತ್ ಚಕ್ರತೀರ್ಥ ತಿದ್ದುಪಡಿ ಮಾಡಿದ ಪಠ್ಯವನ್ನು ಸಿಬಿಎಸ್‌ ನಿರಾಕರಿಸಿದೆ ಅಂದ್ರೆ ಅವನ ಯೋಗ್ಯತೆ ಏನ್ರಿ..? ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಏನೋ ನನಗೆ ಗೊತ್ತಿಲ್ಲ.  ಸತ್ಯವನ್ನು ಹೇಳಿದರೆ ನಾನು ಹುತಾತ್ಮನಾಗುತ್ತೇನೆ ಅಂತಾದರೆ ನಾನು ಅದಕ್ಕೆ ಸಿದ್ಧನಿದ್ದೇನೆ' ಎಂದು ದಾವಣಗೆರೆಯಲ್ಲಿ ಕುಂ ವೀರಭದ್ರಪ್ಪ ಹೇಳಿದರು.